
ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ – ಅಶ್ವತ್ ನಾರಾಯಣ್ ಕಿಡಿ
ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಬೇರೆ ಪಕ್ಷದ ನಾಯಕರು ಆಗಮಿಸುವಾಗ ಮೊದಲು ಜಾಮೂನು ಕೊಡುತ್ತಾರೆ ಅದಾದ ನಂತರ ವಿಷ ಕೊಡುತ್ತಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸ್ವ ಪಕ್ಷದ ವಿರುದ್ಧವೇ ತಮ್ಮ ಅವಸಮಾಧಾನವನ್ನು ಹೊರ ಹಾಕಿದ್ದರು. ಶಾಸಕ ಡಾಕ್ಟರ್ ಅಶ್ವತ್ ನಾರಾಯಣ್ ತಿರುಗೇಟು ನೀಡಿದ್ದು ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಬೇರೆ ಪಕ್ಷದಲ್ಲಿ ಅಲ್ಲ ಎಂದು ಕಿಡಿ ಕಾರಿದ್ದಾರೆ.
ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂಬ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ.
ಸೋಮಶೇಖರ್ ಗೆ ಬಿಜೆಪಿ ಎಲ್ಲಾ ರೀತಿಯಿಂದ ಸ್ಥಾನಮಾನವನ್ನು ಕೊಟ್ಟು ಗೌರವಿಸಿದೆ. ಶಾಸಕ ಸೋಮಶೇಖರ್ ರನ್ನು ಒಂದು ದಿನವೂ ಬಿಜೆಪಿ ಪಕ್ಷ ಕಡೆಗಣಿಸಿಲ್ಲ. ಕಾಂಗ್ರೆಸ್ ನಲ್ಲಿ ಜಾಮೀನು ವಿಷ ಕೊಡುವುದು.ಶಾಸಕ ಎಸ್ ಟಿ ಸೋಮಶೇಖರ್ ಹೆಗಲ ಮೇಲೆ ಯಾವುದೇ ರೀತಿಯಾದಂತಹ ಭಾರ ಹೊರೆಸಿಲ್ಲ. ಏನೇ ಮಾತು ಹೇಳಿದರೂ ಸೋಮಶೇಖರ್ ಅವರು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿಯಲ್ಲಿದ್ದು ಈ ರೀತಿ ಹೇಳಿಕೆ ಕೊಡುವುದು ಸೂಕ್ತವಲ್ಲ. ಸೋಮಶೇಖರ್ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಮೆಚ್ಚಿಸಲು ಮಾತನಾಡುತ್ತಿದ್ದಾರೆ. ಅವರೇ ಮುಳುಗುತ್ತಿದ್ದಾರೆ ಇವರು ಯಾಕೆ ಆ ಹಡಗು ಹತ್ತುತ್ತಿದ್ದಾರೋ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾಅಶ್ವಥ್ ನಾರಾಯಣ್ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.




