ಬೆಂಗಳೂರು ಸೇರಿದಂತೆ 14 ಕಡೆಯಲ್ಲಿ ಸರ್ವೇ ಅಧಿಕಾರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಸರ್ವೇ ಸೂಪರ್ ವೈಸರ್ ಗೆ ಸೇರಿದಂತೆ ನಿವಾಸ, ಕಚೇರಿಯ ಮೇಲೆ ಬೆಂಗಳೂರು, ತುಮಕೂರಿನ 14 ಕಡೆಯಲ್ಲಿ ಇಂದು ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಿದೆ.

ಬೆಂಗಳೂರಿನ ಕೆ ಆರ್ ಪುರಂ ತಾಲೂಕು ಕಚೇರಿಯ ಸರ್ವೇ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮನೆ, ಕಚೇರಿ, ಸಂಬಂಧಿಕರ ಮೇಲೆ 14 ಕಡೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಕೆ ಆರ್ ಪುರಂ ತಾಲೂಕು ಕಚೇರಿಯಲ್ಲಿ ಸರ್ವೇ ಸೂಪರ್ ವೈಸರ್ ಆಗಿರುವಂತ ಕೆ.ಟಿ ಶ್ರೀನಿವಾಸ್ ಅವರು ಐದಕ್ಕೂ ಹೆಚ್ಚು ಅಬಕಾರಿ ಲೈಸೆನ್ಸ್ ಹೊಂದಿದ್ದಾರೆ ಎಂಬುದಾಗಿ ಆರೋಪ ಕೇಳಿ ಬಂದಿತ್ತು.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಅವರ ಕಚೇರಿ, ಆಂಧ್ರಹಳ್ಳಿ ನಿವಾಸ, ಹೆಣ್ಣೂರಿನಲ್ಲಿನ ಸಹೋದರಿ ನಿವಾಸ, ಪತ್ನಿ ಹೆಸರಿನ ಹೋಟೆಲ್ ಬೋರ್ಡಿಂಗ್ ಹೌಸ್, ಶ್ರೀನಿವಾಸ್ ಸಹೋದರನ ಮನೆಯಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.

ನಿಗದಿಗಿಂತ ಹೆಚ್ಚು ಆಸ್ತಿ ಗಳಿಸಿರೋ ಆರೋಪದ ಹಿನ್ನಲೆಯಲ್ಲಿ ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ನಿವಾಸ, ಕಚೇರಿ, ಸಂಬಂಧಿಕರ ಮೇಲೆ ಬೆಂಗಳೂರು, ತುಮಕೂರು ಸೇರಿದಂತೆ 14 ಕಡೆಯಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇದೀಗ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Latest Indian news

Popular Stories