ಬೆಂಗಳೂರು: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಮಾಡಲಾಗಿದ್ದಂತ ಮಾನಹಾನಿ ಕೇಸ್ ರದ್ದು ಪಡಿಸಲು ಹೈಕೋರ್ಟ್ ನಕಾರ ವ್ಯಕ್ತ ಪಡಿಸಿದೆ. ಈ ಮೂಲಕ ಕರ್ನಾಟಕ ಬಿಜೆಪಿಗೆ ಬಿಗ್ ಶಾಕ್ ನೀಡಲಾಗಿದೆ.
2019ರಲ್ಲಿ ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಹಷದ್ ಅವರ ಬಗ್ಗೆ ಕರ್ನಾಟಕ ಬಿಜೆಪಿಯಿಂದ ನಕಲಿ ವೋಟರ್ ಐಡಿ ಕುರಿತಂತೆ ಟ್ವಿಟ್ ಮಾಡಲಾಗಿತ್ತು.
ಈ ಟ್ವಿಟ್ ಮೂಲಕ ನನ್ನ ಮಾನಹಾನಿಯಾಗಿದೆ ಎಂಬುದಾಗಿ ಕೇಸ್ ಹಾಕಿದ್ದರು. ಬಿಜೆಪಿ ವಿರುದ್ಧ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ದೂರು ನೀಡಿದ್ದರು.
ಆದ್ರೇ ಈ ಪ್ರಕರಣ ಪ್ರಶ್ನಿಸಿ ಅಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಂತ ನಳೀನ್ ಕುಮಾರ್ ಕಟೀಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಾ ದೀಕ್ಷಿತ್ ಅವರನ್ನೊಳಗೊಂಡ ನ್ಯಾಯಪೀಠವು, ರಾಜಕೀಯ ಪಕ್ಷದ ವಿರುದ್ಧ ಕೇಸ್ ಮುಂದುವರೆಸಬಹುದು ಎಂಬುದಾಗಿ ಅಭಿಪ್ರಾಯ ವ್ಯಕ್ತ ಪಡಿಸಿದೆ. ಅಲ್ಲದೇ ಕೇಸ್ ರದ್ದು ಪಡಿಸೋದಕ್ಕೆ ನಕಾರ ವ್ಯಕ್ತಪಡಿಸಿದೆ.