
ರಾಜ್ಯದಲ್ಲಿ ‘ಹೆಣ್ಣು ಭ್ರೂಣ ಹತ್ಯೆ’ ಪ್ರಕರಣ: ಇಂದು ಅಧಿಕೃತವಾಗಿ ‘CID’ಗೆ ಕೇಸ್ ವರ್ಗಾವಣೆ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿದ್ದಂತ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಸಂಬಂಧ ಸರ್ಕಾರ ಸಿಐಡಿ ತನಿಖೆಗೆ ಕೇಸ್ ವರ್ಗಾವಣೆ ಮಾಡಿತ್ತು. ಇಂದು ಅಧಿಕೃತವಾಗಿ ಈ ಸಂಬಂಧ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.
ರಾಜ್ಯದ ಬೆಂಗಳೂರು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 88 ದಿನಗಳಲ್ಲಿ 287 ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿರೋ ಭಯಾನಕ ಪ್ರಕರಣ ಬೆಳಕಿಗೆ ಬಂದಿತ್ತು.ಈ ಪ್ರಕರಣ ಸಂಬಂಧ ಈವರೆಗೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭ್ರೂಣ ಹತ್ಯೆ ಕೇಸ್ ಗಂಭೀರತೆಯನ್ನು ಅರಿತಿದ್ದಂತ ರಾಜ್ಯ ಸರ್ಕಾರ, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ, ಆದೇಶ ಹೊರಡಿಸಿತ್ತು. ಈ ಆದೇಶದಂತೆ ಇಂದು ಅಧಿಕೃತವಾಗಿ ಸಿಐಡಿಗೆ ಕೇಸ್ ವರ್ಗಾವಣೆ ಮಾಡಲಾಗಿದೆ.ಈವರೆಗೆ ಬೈಯ್ಯಪ್ಪನಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್ ಅವರು ಹೆಣ್ಣು ಭ್ರೂಣ ಹತ್ಯೆ ಕೇಸ್ ಬಗ್ಗೆ ತನಿಖೆ ನಡೆಸುತ್ತಿದ್ದರು. ಇಂತಹ ಪ್ರಕರಣವನ್ನು ಸಿಐಡಿಗೆ ತನಿಖೆಗೆ ಆದೇಶಿಸಿದ ನಂತ್ರ, ತನಿಖೆಯ ಹೊಣೆಗಾರಿಕೆ ಸಿಐಡಿ ಡಿವೈಎಸ್ಪಿ ನಾಗರಾಜ್ ಅವರಿಗೆ ವಹಿಸಲಾಗಿತ್ತು.




