
Bengaluru UrbanFeatured Story
ಬಸ್ ಡ್ರೈವ್ ಮಾಡುವಾಗ ಹೃದಯಾಘಾತ – ಚಾಲಕ ಮೃತ್ಯು
ಬೆಳಗಾವಿ:ಬಸ್ ಚಲಾಯಿಸುವಾಗ ಹೃದಯಘಾತ ಸಂಭವಿಸಿದ ಪರಿಣಾಮ ಚಾಲಕ ಚಾಲಕ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೃತಪಟ್ಟ ಚಾಲಕನನ್ನು ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ (41)ಎಂದು ಗುರುತಿಸಲಾಗಿದೆ. ಇವರು ದೊಡವಾಡ ಗ್ರಾಮದ ನಿವಾಸಿಯಾಗಿದ್ದಾರೆ.
ಮೂಗಪ್ಪ ಶಿವಪುತ್ರಪ್ಪ ಸಂಗೊಳ್ಳಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವದತ್ತಿ ಘಟಕಕ್ಕೆ ಸೇರಿದ ಬಸ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದ ಬಸ್ ಚಾಲಕ ಸವದತ್ತಿಯಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭ ಹೃದಯಘಾತ ಸಂಭವಿಸಿದೆ.ತೀವ್ರ ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ.
ಎದೆ ನೋವಿನಿಂದ ನರಳುತ್ತಿದ್ದ ಮೂಗಪ್ಪರನ್ನು ಬಸ್‌ನಲ್ಲಿದ್ದ ಪ್ರಯಾಣಿಕರು ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ.ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಚಾಲಕ ಮೂಗಪ್ಪ ಶಿವಪುತ್ರಪ್ಪ ಕೊನೆಯುಸಿರು ಎಳೆದಿದ್ದಾರೆ.




