Bengaluru UrbanFeatured Story

ಬೆಸ್ಕಾಂ ಕೊಟ್ಟ 68,526 ರೂ ‘ದಂಡ’ದ ಬಿಲ್ ಕಟ್ಟಿದ್ದೇನೆ, ಕಳ್ಳ ಅಂತ ಕರೀತಿರಲ್ಲ ‘-‘ ಅದನ್ನ ನಿಲ್ಲಿಸಿ – HDK

ಬೆಂಗಳೂರು: ನಾನು ಮಾಡಿದ್ದು ತಪ್ಪು. ನನ್ನ ತಪ್ಪಿಗೆ ವಿಷಾದ ಕೂಡ ವ್ಯಕ್ತ ಪಡಿಸಿದ್ದೇನೆ. ನಾನು ಮಾಡಿದಂತ ತಪ್ಪಿಗಾಗಿ ಬೆಸ್ಕಾಂ ರೂ.68,526 ದಂಡವನ್ನು ವಿಧಿಸಿದೆ. ಅದನ್ನು ಕಟ್ಟಿದ್ದೇನೆ. ಅದೇನೋ ಕರೀತಿರಲ್ಲ ವಿದ್ಯುತ್ ಕಳ್ಳ ಅನ್ನೋದನ್ನು ನಿಲ್ಲಿಸಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಮನೆಯ ದೀಪಾಲಂಕಾರಕ್ಕೆ ಪಡೆದಂತ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ತಪ್ಪಿನ ಅರಿವಾದ ಕೂಡಲೇ ವಿಷಾದ ವ್ಯಕ್ತ ಪಡಿಸಿದ್ದೇನೆ. ಬೆಸ್ಕಾಂ ಅಧಿಕಾರಿಗಳು ನನಗೆ ಕೊಟ್ಟ ದಂಡದ ಪಾವತಿಯನ್ನು ಮಾಡಿದ್ದೇನೆ
ನನಗೊಂದು ಲೇಬರ್ ಬೇರೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಂದ ಸೇರಿ ವಿದ್ಯುತ್ ಕಟ್ಟ ಪಟ್ಟಕೊಟ್ಟಿದ್ದಾರೆ. ಆದ್ರೇ ನಾನು ಇದಕ್ಕಾಗಿ ವಿಷಾದ ವ್ಯಕ್ತ ಪಡಿಸಿದ್ದೇನೆ ಎಂದರು.

ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದೇನೆ ಎಂಬ ಕುರಿತಂತೆ ನಾನು 2.25 ಕಿಲೋವ್ಯಾಟ್ ವಿದ್ಯುತ್ ಅಕ್ರಮವಾಗಿ ಬಳಕೆ ಮಾಡಿದ್ದೇನೆ ಎಂಬುದಾಗಿ ಬಿಲ್ ಕೊಟ್ಟಿದ್ದಾರೆ.
ನನ್ನ ಮನೆಗೆ 33 ಕಿಲೋ ವ್ಯಾಟ್ ಗಾಗಿ ಪರ್ಮೀಷನ್ ಪಡೆದಿದ್ದೇನೆ.ಆದ್ರೇ ದೀಪಾಲಂಕಾರಕ್ಕೆ ವಿದ್ಯುತ್ ಸಂಪರ್ಕ ಅಕ್ರಮ ಪಡೆದ ಆರೋಪದ ಹಿನ್ನಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ನನಗೆ 68,526 ರೂಪಾಯಿ ದಂಡದ ಬಿಲ್ ನೀಡಿದ್ದಾರೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button