ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯನ್ನು ನಾಳೆ ಬೆಳಗಾವಿಯ ಶೂನ್ಯ ಫಾರಂ ರೀಟ್ರೀಟ್ ನಲ್ಲಿ ನಡೆಸೋದಕ್ಕೆ ನಿಗದಿಪಡಿಸಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಈ.ತುಕಾರಾಮ್ ಮಾಹಿತಿ ನೀಡಿದ್ದು, ದಿನಾಂಕ:-13-12-2023ರ ಬುಧವಾರದಂದು ಸಂಜೆ 7.00 ಗಂಟೆಗೆ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಬೆಳಗಾವಿಯ ಬೆಳಗುಂದಿ, ರಕಪ್ ರಸ್ತೆ, ಶಿವಾಜನಗರ ಗೌಂಡ್ ಹತ್ತಿರವಿರುವ “ಶೂನ್ಯ ಫಾರಂ ಲೀಗ್ರೇಟ್” ಇಲ್ಲಿ ಕರೆಯಲಾಗಿದೆ ಎಂದು ತಿಳಿಸಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಭೆಯಲ್ಲಿ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರು ಹಾಗೂ ವಿಧಾನ ಪಲಷತ್ತಿನ ಸಭಾ ನಾಯಕರಾದ ಮಾನ್ಯ ಶ್ರೀ ಎನ್.ಎಸ್. ಭೋಸರಾಜು ರವರು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಉಪಸ್ಥಿತಲಿರುತ್ತಾರೆ ಎಂದು ಹೇಳಿದ್ದಾರೆ.