ಬೆಂಗಳೂರು : ಲಾರಿ ಹಾಗೂ ಬೈಕ್ ನಡುವೆ ಬೀಕರ ಅಪಘಾತ- ಬೈಕ್ ಸವಾರ ಮೃತ್ಯು

ಬೆಂಗಳೂರು : ನಗರದ ಬನ್ನೇರುಘಟ್ಟ ರಸ್ತೆಯ ಕೋಳಿಫಾರಂ ಗೇಟ್ ನಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ,ಬೀಕರ ಅಪಘಾತ ಸಂಭವಿಸಿ ಬೈಕ್ಸ್ಥ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ನಡೆದಿದೆ.

ಈ ಅಪಘಾತದಲ್ಲಿ ಪುಟ್ಟೇನಹಳ್ಳಿ ನಿವಾಸಿ ಸತ್ಯೇಂದ್ರ ಸಿಂಗ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಗೊಟ್ಟಿಗೆರೆ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪಘಾತದ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಅಪಘಾತಕ್ಕೆ ಕಾಂಕ್ರಿಟ್ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.

Latest Indian news

Popular Stories