ನನಗೂ ಬೆದರಿಕೆ ಇ-ಮೇಲ್ ಬಂದಿದೆ: ಸಚಿವ ಜಿ.ಪರಮೇಶ್ವರ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯ ಡಿ.ಕೆ.ಶಿವಕುಮಾರ್ ಅವರಿಗೆ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿತ್ತು.ಇದೀಗ ಗೃಹ ಸಚಿವ ಜಿ. ಪರಮೇಶ್ವರ್, ನನಗೂ ಕೂಡ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೂ ಕೂಡ ಇ-ಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ.ಈ ಹಿಂದೆ ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಮೇಲೆ ಸಂದೇಶ ಬಂದಿತ್ತು.ಇಂತಹ ಕೇಸ್ ಗಳನ್ನು ಭೇದಿಸುವುದಕ್ಕೆ ಸ್ವಲ್ಪ ಕಷ್ಟ ಆಗುತ್ತದೆ ಎಂದರು.ಬೇರೆ ದೇಶದ ಏಜೆನ್ಸಿಗಳು ಸಪೋರ್ಟ್ ಮಾಡುತ್ತಿಲ್ಲ.ಫೇಸ್ಬುಕ್, ಗೂಗಲ್ ಅಂತ ಕಂಪನಿಗಳು ಸಹಕರಿಸುವುದಿಲ್ಲ. ಅಂತಹ ಕಂಪನಿ ಸಹಕರಿಸಿದರೆ ಸುಲಭವಾಗಿ ಕೇಸ್ ಅನ್ನು ಭೇದಿಸಬಹುದು ಎಂದು ಹೇಳಿದ್ದಾರೆ.

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇ-ಮೇಲ್ ಸಂದೇಶ ಬಂದಿತ್ತು. ಈ ಕುರಿತಾಗಿ ಪೊಲೀಸರು ಇದೀಗ ಇಮೇಲ್ ಸಂದೇಶ ಎಲ್ಲಿಂದ ಬಂದಿದ್ದೆ? ಯಾರು ಕಳುಹಿಸಿದ್ದಾರೆ ಎನ್ನುವುದರ ಕುರಿತು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಲ್ಲದೆ ಬೆಂಗಳೂರು ನಗರದಾದ್ಯಂತ ತೀವ್ರ ಕಟ್ಟೇಚ್ಚರ ವಹಿಸಲಾಗಿದೆ.

Latest Indian news

Popular Stories