
Bengaluru Urban
ವನ್ಯಜೀವಿ ಅಂಗಾಂಗ ಒಪ್ಪಿಸಲು 2 ತಿಂಗಳು ಸಮಯ ಕಾಲಾವಕಾಶ ಅಷ್ಟೇ : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು(ಅ.28),ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಉಗುರುಗಳು ಯಾರು ಧರಿಸಿದರೂ ಅದು ತಪ್ಪೇ ಶಿಕ್ಷೆ ಎಲ್ಲರಿಗೂ ಒಂದೇ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2 ತಿಂಗಳ ಕಾಲಾವಕಾಶ ಇದೆ ಎಂದು ಸಚಿವ ಈಶ್ವರ್ ಕಂಡ್ರೆ ಹೇಳಿದ್ದಾರೆ.
ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಹಾಗೂ ಉಗುರುಗಳನ್ನು ಸಂಗ್ರಹಿಸುವುದುಕಾನೂನಿನ ಪ್ರಕರಣ ಅಪರಾಧ.ಹೀಗಾಗಿಯೇ ಹುಲಿ ಉಗುರಿನ ಆಭರಣ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದ್ದು, ಕೆಲವರನ್ನು ಬಂಧಿಸಿ, ಪ್ರಕರಣವನ್ನೂ ದಾಖಲಿಸಲಾಗಿದೆ.
ಅದೇ ರೀತಿ ಮಾಹಿತಿಯ ಕೊರತೆಯಿಂದ ತಮ್ಮ ಬಳಿ ಇಟ್ಟುಕೊಂಡಿರುವವರು ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುರುವಾರ ಘೋಷಿಸಿದ್ದರು. ಅದರಂತೆ ಇದೀಗ ವನ್ಯಜೀವಿಗಳ ದೇಹದ ಭಾಗಗಳನ್ನು ಅರಣ್ಯ ಇಲಾಖೆಗೆ ನೀಡಲು 60 ದಿನಗಳ (2 ತಿಂಗಳ) ಕಾಲಾವಕಾಶ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.




