ಶಾಲೆಗಳಿಗೆ ಬಂದಿರುವ ಬಾಂಬ್‌ ಬೆದರಿಕೆ ಇ-ಮೇಲ್‌ನ ಸಂದೇಶ ನೋಡಿದರೆ ಭಯೋತ್ಪಾದಕರ ಕೆಲಸದಂತೆ ಕಾಣುತ್ತಿದೆ – ಆರ್. ಅಶೋಕ್

ಬೆಂಗಳೂರು(ಡಿ.02): ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಹಿನ್ನೆಲೆ ಸೂಕ್ತ ತನಿಖೆಯಾಗಬೇಕು. ಇ-ಮೇಲ್‌ನ ಸಂದೇಶ ನೋಡಿದರೆ ಇದೊಂದು ಭಯೋತ್ಪಾದಕರ ಕೆಲಸದಂತೆ ಕಾಣುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಬಾಂಬ್‌ ಬೆದರಿಕೆ ಸುದ್ದಿ ಹೊರಬಿದ್ದ ಬೆನ್ನಲ್ಲೇ ಶುಕ್ರವಾರ ಬಸವೇಶ್ವರನಗರದ ನ್ಯಾಫಲ್‌ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಾಂಬ್‌ ಬೆದರಿಕೆ ಇ-ಮೇಲ್‌ನಲ್ಲಿ ಮುಸ್ಲಿಂ, ಅಲ್ಲಾಹು, ದೇವಸ್ಥಾನ, ಮುಂಬೈ ಹೋಟೆಲ್‌ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಲಾಗಿದೆ.

ಮಕ್ಕಳ ಜೀವ ಮುಖ್ಯ. ಪೋಷಕರು ಬಹಳ ಆತಂಕದಲ್ಲಿದ್ದಾರೆ. ಈ ಬೆದರಿಕೆ ಹಿಂದೆ ಭಯೋತ್ಪಾದನೆ ಹಿನ್ನೆಲೆಯುಳ್ಳವರ ಕೈವಾಡ ಇರುವಂತಿದೆ. ಬೆಂಗಳೂರು ನಗರದಲ್ಲಿ ಪದೇ ಪದೇ ಈ ರೀತಿ ಆದರೆ ಬೆಂಗಳೂರು ಬ್ರಾಂಡ್‌ಗೆ ತೊಂದರೆಯಾಗುತ್ತದೆ. ಇದರ ಹಿಂದೆ ದೊಡ್ಡ ಜಾಲ ಇರುವ ಸಾಧ್ಯತೆಯಿದ್ದು, ಪೊಲೀಸರು ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದರು.

Latest Indian news

Popular Stories