ರಾಮೇಶ್ವರಂ ಕೆಫೆ ‘ ಬ್ಲಾಸ್ಟ್ ಕೇಸ್ : ಸ್ಪೋಟಿಸಲು ಬಳಸಿದ್ದ ಕೆಮಿಕಲ್ಸ್ ಪತ್ತೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಿಸಲು ಬಳಸಿದ್ದ ಕೆಮಿಕಲ್ಸ್ ಪತ್ತೆಯಾಗಿದೆ.

ರಾಮೇಶ್ವರಂ ಕೆಫೆಯಲ್ಲಿ ಟೈಮರ್ ಫಿಕ್ಸ್ ಮಾಡಿ ಸ್ಪೋಟಿಸಲು ಬಳಸಿದ್ದ ರಾಸಾಯನಿಕಗಳು ಪತ್ತೆಯಾಗಿವೆ. ಪೊಟ್ಯಾಷಿಯಂ ನೈಟ್ರೇಟ್ ಮತ್ತು ಹೈಡ್ರೋಜನ್ ಪರಾಕ್ಸೈಡ್ ಬಳಸಿ ಕೃತ್ಯ ಎಸಗಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.ಸದ್ಯ, ಸ್ಫೋಟದ ಅವಶೇಷಗಳ ಮಾದರಿಗಳನ್ನು ಎಫ್‌ಎಸ್‌ಎಲ್ ತಂಡ ಸಂಗ್ರಹಿಸಿದೆ.

ಸ್ಫೋಟಗೊಂಡ ಸ್ಥಳದಲ್ಲಿ ಈಗಾಗಲೇ ಬ್ಯಾಟರಿ, ಟೈಮರ್ ಪತ್ತೆಯಾಗಿದೆ. ಆದ್ದರಿಂದ ಟೈಮರ್ ಇಟ್ಟು ಬಾಂಬ್ ಸ್ಫೋಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ

Latest Indian news

Popular Stories