ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 83,000 ಕೋಟಿ ರೂ.ಯಷ್ಟು ಅನ್ಯಾಯ ಆಗಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು (ಡಿ.14):ಕೇಂದ್ರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲೇ ರಾಜ್ಯಕ್ಕೆ 83,000 ಕೋಟಿ ರು.ನಷ್ಟು ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಡೆದ ಆರೋಪ-ಪ್ರತ್ಯಾರೋಪದ ಬಳಿಕ 3,542 ಕೋಟಿ ರು.ಗಳ ಪೂರಕ ಅಂದಾಜು ಹಾಗ ಧನ ವಿನಿಯೋಗ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.ಪ್ರಸ್ತಾವಕ್ಕೆ ಅಂಗೀಕಾರ ಕೋರಿ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಬಸವರಾಜ ರಾಯರೆಡ್ಡಿ ಪ್ರಸ್ತಾಪಿಸಿರುವಂತೆ 2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 21.57 ಲಕ್ಷ ಕೋಟಿ ರು.2019-20ರಲ್ಲಿ 27,86 ಲಕ್ಷ ಕೋಟಿ ರು. ಬಜೆಟ್‌ನಲ್ಲಿ 61,786 ಕೋಟಿ ರು. ರಾಜ್ಯಕ್ಕೆ ಬಂದಿತ್ತು.

ಆದರೆ 15ನೇ ಹಣಕಾಸು ಆಯೋಗದ ವರದಿ ಯಲ್ಲಿ ಆದ ತಾರತಮ್ಯದಿಂದ 2023-24ರಲ್ಲಿ ಕೇಂದ್ರದ ಬಜೆಟ್ ೪೫.೦೩ ಲಕ್ಷ ಕೋಟಿ ರು. ಇದ್ದರೂ 50,257 ಕೋಟಿ ರು.ಮಾತ್ರ ಬಂದಿದೆ. ತನ್ಮೂಲಕ ಅಂದಾಜು 73 ಸಾವಿರ ಕೋಟಿ ರು.ನಷ್ಟ ಉಂಟಾಗಿದೆ.

Latest Indian news

Popular Stories