ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಕೊಡಲಿಯೇಟು : ಕಾಂಗ್ರೆಸ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ

ಬೆಂಗಳೂರು: ರಾಮಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸುವ ಮೂಲಕ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಕಾಂಗ್ರೆಸ್ ಮತ್ತೆ ಧಕ್ಕೆ ತಂದಿದೆ ಎಂದು ಕಾರ್ಕಳ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಭಾಗವಹಿಸದಿದ್ದರೆ ಚಿಂತೆ ಇಲ್ಲ.ಈ ಕ್ಷಣದಿಂದ ರಾಮಮಂದಿರ ಹಾಗೂ ಅಯೋಧ್ಯೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ. ಅಯೋಧ್ಯೆ ಕಾರ್ಯಕ್ರಮದ ಆಹ್ವಾನ ತಿರಸ್ಕರಿಸುವುದಕ್ಕೆ ಕಾಂಗ್ರೆಸ್ ನೀಡಿರುವ ಕಾರಣವೇ ಹಾಸ್ಯಾಸ್ಪದ.

ಅಪೂರ್ಣ ಕಟ್ಟಡದ ಉದ್ಘಾಟನೆಗೆ ಬರುವುದಿಲ್ಲ ಎಂಬುವುದು ಕಳ್ಳನಿಗೆ ಪಿಳ್ಳೆ ನೆಪ ಅಷ್ಟೆ. ನಿಮ್ಮ ಮನಸಿನಲ್ಲಿದ್ದ ರಾಮ ವಿರೋಧಿ ನಿಲುವು ಹಾಗೂ ಹಿಂದೂ ವಿರೋಧಿ ನಿಲುವು ಈಗ ಮತ್ತೆ ಬಹಿರಂಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಇಂತಹ ಮನಸ್ಥಿತಿಯನ್ನು ದೇಶದ ಪ್ರಜ್ಞಾವಂತ ಜನ ಅರಿತುಕೊಂಡಿದ್ದಾರೆ ಎಂದು ಸುನಿಲ್ ಕುಮಾರ್ ಟಾಂಗ್ ನೀಡಿದ್ದಾರೆಯಾಗಿದೆ.

Latest Indian news

Popular Stories