ಔರಾದ ರಾಜಕಾರಣದಲ್ಲಿ ಭಾರೀ ಟ್ವೀಸ್ಟ್
ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ಹೊಸ ಪ್ಲಾನ್

ಬೀದರ್ : ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ,ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಔರಾದನಲ್ಲಿ ಪಕ್ಷಾಂತರ ಪರ್ವ ಹೆಚ್ಚಾಗಿದೆ,ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕಾಂಗ್ರೆಸ್ ಸೇರಿಕೊಂಡಿದ್ದಾರೆ.


ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಸಿದ್ದರಾಮಯ್ಯ ರವರ ಅಪ್ತ ಭೀಮಸೇನರಾವ ಸಿಂಧೆಯವರು ಕಣ ದಲ್ಲಿಯಿದ್ದಾರೆ
ಕಾಂಗ್ರೆಸ್ ಪಕ್ಷವು ಈ ಬಾರಿ ಲಿಂಗಾಯತ ಮತ್ತು ಮರಾಠ ಸಮುದಾಯದ ಮತಗಳ ಮೇಲೆ ಕಣ್ಣೀಟ್ಟಿದು ,ಅನೇಕರನ್ನು ಈಗಾಗಲೇ ಪಕ್ಷಕ್ಕೆ ಸೇರಿಕೊಂಡಿದೆ ,ಅದರೆ ಇಂದು ಔರಾದ ಪಟ್ಟಣದಲ್ಲಿ ನಡೆದ 2023 ರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ನೇತೃತ್ವದಲ್ಲಿ ಮಾಜಿ ಶಾಸಕ ಗುಂಡಪ್ಪ ಬಿರಾದರಾ (ವಕೀಲ್ ) ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ ,ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ವಿರುದ್ದ ಅಡಳಿತ ವಿರೋಧಿ ಅಲೆಯಿದ್ದು ,ಲಿಂಗಾಯತರು ಚವ್ಹಾಣ್ ಮೇಲೆ ಮುನಿಸಿಕೊಂಡಿದರು ,ಇದನ್ನು ಕಂಟ್ರೋಲ್ ಮಾಡಲು ಇಂದು ಬಿ ಎಸ್ ವೈ ಕ್ಷೇತ್ರಕ್ಕೆ ಅಗಮಿಸಿದ್ದು ಪ್ರಭು ಚವ್ಹಾಣ್ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.


ಇದೇ ವೇಳೆ ಮಾತಾನಾಡಿದ ಬಿ ಎಸ್ ವೈ ಈ ಸಲ್ ಔರಾದ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ಅವರನ್ನು ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಮತ್ತು ವೀರಶೈವ ಲಿಂಗಾಯತರು ಈ ಬಾರಿ ಚವ್ಹಾಣ ಮುಖ ನೋಡಿ ಅಲ್ಲ ನನ್ನ ಮುಖ ನೋಡಿ ಬಿಜೆಪಿ ವೋಟ್ ಮಾಡಿ,ಬಿಜೆಪಿ ನನ್ನಗೆ ಮೋಸ ಮಾಡಿಲ್ಲ ನಾನು ಸ್ವ ಇಚ್ಛೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ ಎಂದರೂ
ಈ ಕಾರ್ಯಕ್ರಮದಲ್ಲಿ ವಿಧಾಸ ಪರಿಷತ್ ಸದ್ಯಸರಾದ ಎನ್ ರವಿಕುಮಾರ್,ಶಿವಾನಂದ ಮಠಾಳಕ್ಕರ್ ,ರಾಮಶೆಟ್ಟಿ ಪನ್ನಾಳೆ ,ಜಲಾದೆ,ವಸಂತ್ ಬಿರಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Latest Indian news

Popular Stories