ಹಾಸನ ಪೆನ್’ಡ್ರೈವ್ ಪ್ರಕರಣ: “ಯಾವುದೋ 4-5 ವರ್ಷ ಹಳೆಯದ್ದು ತೆಗೆದುಕೊಂಡು ಬಂದ್ರೆ” | ಇದಕ್ಕೆಲ್ಲ ಹೆದರುವುದಿಲ್ಲ – ಎಚ್.ಡಿ ರೇವಣ್ಣ

ಬೆಂಗಳೂರು: ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಲೈಂಗಿಕ ಹಗರಣದ ಕುರಿತು ಮೊದಲ ಬಾರಿಗೆ ರೇವಣ್ಣ ಮಾತನಾಡಿದ್ದು, ” SIT ತನಿಖೆಯಾಗಲಿ. ಪೂರ್ವ ನಿಗದಿಯಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾನೆ. ತನಿಖೆಗೆ ಕರೆದರೆ ಬಂದು ಸಹಕರಿಸುತ್ತಾನೆ” ಎಂದರು.

ಇದಕ್ಕೆಲ್ಲ ನಾನು ಹೆದರುವುದಿಲ್ಲ. ಯಾವೂದೋ 4-5 ವರ್ಷ ಹಳೆಯದ್ದು ತೆಗೆದುಕೊಂಡು ಬಂದು ಕೇಸ್ ಹಾಕಿದ್ರೆ? ನಾನು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುದಿಲ್ಲ. ನಾನು ಇದಕ್ಕೆಲ್ಲ ಹೆದರುವುದಿಲ್ಲ. ಕಾನೂನು ರೀತಿಯಲ್ಲಿ ಎದುರಿಸಲು ಸಿದ್ಧ ಎಂದು ಹೇಳಿದರು. ಉಚ್ಚಾಟಿಸುವುದು ಬಿಡುವುದು ಪಕ್ಷದ ನಿರ್ಧಾರ ಎಂದು ಹೇಳಿದರು.

Latest Indian news

Popular Stories