ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಿ: ಪ್ರಭು ಚವ್ಹಾಣ್

ಬೀದರ ಆಗಸ್ಟ್ ೧೩ (ಕರ್ನಾಟಕ ವಾರ್ತೆ): ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಫಸಲ್ ಭಿಮಾ ವಿಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ ರೈತರಿಗೆ ಬೆಳೆನಷ್ಟ ಪರಿಹಾರವು ಸಕಾಲಕ್ಕೆ ಆಗುವಂತೆ ನೋಡಿಕೊಳ್ಳಲು ಕ್ರಮ ವಹಿಸಬೇಕು ಎಂದು ಪಶು ಸಂಗೋಪನೆ ಹಾಗು ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಗಸ್ಟ್ ೧೩ರಂದು ನಡೆದ ೨೦೨೦-೨೧ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ವಿಮಾ ಮೊತ್ತವು ರೈತರಿಗೆ ಸಮರ್ಪಕವಾಗಿ ಸಿಗಬೇಕು. ರೈತರು ಕರೆ ಮಾಡಿ ಕೇಳುವಂತಾಗಬಾರದು. ಕೃಷಿ ಅಧಿಕಾರಿಗಳು ಶ್ರದ್ದೆಯಿಂದ ಕೆಲಸ ಮಾಡಬೇಕು. ಬಾಕಿ ಮೊತ್ತದ ಬಗ್ಗೆ ತಾಲೂಕುವಾರು ಪರಿಶೀಲಿಸಿ, ಬಾಕಿ ಇರುವ ವಿಮಾ ಮೊತ್ತವು ರೈತರ ಖಾತೆಗೆ ಜಮಾ ಆಗುವಂತೆ ಕೂಡಲೇ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಇಡೀ ದೇಶದ ಗಮನ ಸೆಳೆಯುವ ಹಾಗೆ ಬೀದರ ಜಿಲ್ಲೆ ರೈತರು ದಾಖಲೆಯ ಸತತ ೬ ವರ್ಷಗಳ ಕಾಲ ನಂಬರ್ ಒನ್ ಸ್ಥಾನದಲ್ಲಿ ಇರುವ ಹಾಗೆ ವಿಮಾ ಕಂತು ಪಾವತಿಸಿ ಹೆಸರು ನೋಂದಾಯಿಸಿದ್ದಾರೆ. ಮಿಸ್ ಮ್ಯಾಚ್ ಆಗಿರುವ ಕಾರಣಕ್ಕೆ ಬಾಕಿ ಉಳಿದ ೨೦೧೮-೧೯ನೇ ಸಾಲಿನ ೮೦೭೬ ರೈತರ ಕ್ಲೇಮ್ ಸೆಟ್ಲಮೆಂಟ್‌ನ್ನು ಸಕಾಲಕ್ಕೆ ಆಗಲು ಒತ್ತು ಕೊಡಬೇಕು. ಇನ್ಮುಂದೆ ವಿಮಾ ಪರಿಹಾರದ ಹಣವು ಪ್ರಥಮ ಕಂತಿನಲ್ಲಿ ಪ್ರಥಮ ಹಂತದಲ್ಲೇ ಬಿಡುಗಡೆ ಆಗಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸೂಚಿಸಿದರು.
ಈ ವೇಳೆ ಮಾತನಾಡಿದ ಕೃಷಿ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣ ಕವಾಗಿ ಶ್ರಮಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಂಬAಧಿಸಿದAತೆ ಆಗಾಗ ಪ್ರಚಾರ ನಡೆಸಿ ಹೆಸರು ನೋಂದಣ ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಿದ್ದೇವೆ. ೨೦೧೯-೨೦ನೇ ಸಾಲಿನಲ್ಲಿ ವಿಮಾ ಪರಿಹಾರ ಮೊತ್ತವು ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು.
ಸಕಾಲಕ್ಕೆ ತಲುಪಿಸಲು ಸಲಹೆ: ಕಳೆದ ವರ್ಷ ಜಿಲ್ಲೆಯ ೧,೯೭,೦೦೦ ರೈತರು ಪ್ರೀಮಿಯಂ ಅಮೌಂಟ್ ಕಟ್ಟಿದ್ದಾರೆ. ಆದರೆ, ಸಕಾಲಕ್ಕೆ ಪರಿಹಾರ ಮೊತ್ತ ಸಿಗದೇ ರೈತರು ಕಂಗಾಲಾಗುತ್ತಿದ್ದಾರೆ ಎಂದು ಶಾಸಕರಾದ ಈಶ್ವರ ಖಂಡ್ರೆ ಅವರು ತಿಳಿಸಿದರು. ೨೦೨೦-೨೧ನೇ ಸಾಲಿನಲ್ಲಿ ಜಿಲ್ಲೆಯ ೨,೧೩,೦೦೦ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ೭೬,೬೨೫ ರೈತರ ಖಾತೆಗೆ ವಿಮಾ ಮೊತ್ತ ಜಮೆಯಾಗಿದೆ ಎಂದು ಕೃಷಿ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಕ್ರಿಯಾಯೋಜನೆ ಸಲ್ಲಿಸಿದ್ದೇವೆ: ೨೦೨೧-೨೨ನೇ ಸಾಲಿನಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆಗೆ ೨೫ ಕೋಟಿ ರೂ. ಬೇಡಿಕೆಯ ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಿದ್ದೇವೆ. ಸೋಯಾಬೀನ್ ಬಿತ್ತನೆ ಬೀಜ ಸಮರ್ಪಕ ವಿತರಣೆಗೆ ಕ್ರಮ ವಹಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ
೯೪,೭೦೦ ಕ್ವಿಂಟಲ್ ಬಿತ್ತನೆ ಬೀಜ ವಿತರಣೆ ಮಾಡಿದ್ದೇವೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಜಿಪಂ ಸಿಇಓ ಜಹೀರಾ ನಸೀಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರು, ತಹಸೀಲ್ದಾರರು, ಇಓ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು: ಪ್ರಭು ಚವ್ಹಾಣ್
ಬೀದರ ಆಗಸ್ಟ್ ೧೩ (ಕರ್ನಾಟಕ ವಾರ್ತೆ):- ಕೋವಿಡ್-೧೯ ಕಾರಣಕ್ಕೆ ಅಭಿವೃದ್ಧಿ ಕಾರ್ಯಚಟುವಟಿಕೆಗಳು ನಿಲ್ಲಬಾರದು. ಅಧಿಕಾರಿಗಳು ಇದನ್ನರಿತು ನಿಗದಿಪಡಿಸಿದ ಗುರಿಯನುಸಾರ ನಾನಾ ಯೋಜನೆಗಳು ತೀವ್ರಗತಿಯಲ್ಲಿ ಅನುಷ್ಠಾನವಾಗಲು ಕಾರ್ಯ ಪ್ರವೃತ್ತರಾಗಬೇಕು ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದರು.
ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಗಸ್ಟ್ ೧೩ರಂದು ನಡೆದ ತ್ರೈಮಾಡಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಸ್ಸೆಸ್ಸೆಸ್ಕೆ ಕಾರ್ಖಾನೆ ಪುನಶ್ಚೇತನಗೊಳಿಸಿ: ಬೀದರ ಜಿಲ್ಲೆಯ ರೈತಸಮೂಹದ ಜೀವನಾಡಿ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು ಎಂದು ಇದೆ ವೇಳೆ ಶಾಸಕರಾದ ರಾಜಶೇಖರ ಪಾಟೀಲ ಅವರು ತಿಳಿಸಿದರು. ಈ ಕಾರ್ಖಾನೆಯ ಪುನಾರಂಭದ ಬಗ್ಗೆ ಈ ಹಿಂದೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸೇರಿ ನಿಯೋಗ ಒಯ್ದು ಚರ್ಚೆ ಮಾಡಲಾಗಿದೆ. ರೈತರ, ಕಾರ್ಮಿಕರ ಹಿತದೃಷ್ಟಿಯಿಂದ ಬಿಎಸ್ಎಸ್ಕೆ ಕಾರ್ಖಾನೆಯ ಪುನಶ್ಚೇತನಕ್ಕೆ ಒತ್ತು ಕೊಡಲಾಗುವುದು ಎಂದು ಸಚಿವರು ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ: ಈ ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದಂತೆ ರೈತರ ಪ್ರತಿ ಟನ್ ಕಬ್ಬಿಗೆ ೨,೪೫೦ ರೂ ಕೊಡಲು ಜಿಲ್ಲೆಯ ಕಾರ್ಖಾನೆಗಳು ಒಪ್ಪದಿದ್ದರೆ, ಆ ಹಣದ ಪಾವತಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಶಾಸಕರಾದ ಈಶ್ಚರ ಖಂಡ್ರೆ ತಿಳಿಸಿದರು. ಕಬ್ಬು ಮಾರಾಟ ದರ ನಿಗದಿಪಡಿಸುವುದಕ್ಕೆ ಸಂಬAಧಿಸಿದAತೆ ಈ ಹಿಂದೆ ನಡೆದ ಹಲವಾರು ಸಭೆಗಳಲ್ಲಿ ವಾಗ್ದಾನ ಮಾಡಿದಂತೆ ಸಕ್ಕರೆ ಕಾರ್ನಾನೆಗಳು ರೈತರಿಗೆ ಹಣ ಪಾವತಿಸಿವೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಅವಶ್ಯಕತೆಯಿಲ್ಲ, ಕಾರ್ಖಾನೆಗಳಿಂದಲೇ ರೈತರ ಕಬ್ಬಿನ ಹಣ ಪಾವತಿಸಲಾಗುವುದು ಎಂದು ಸಚಿವರು ಪ್ರತಿಕ್ರಿಯಿಸಿದರು.
ನೆಟ್ ವರ್ಕ್ ಸಮಸ್ಯೆ ಪರಿಹರಿಸಿ: ಭಾರತ ಸಂಚಾರ ನಿಗಮ ಲಿಮಿಟೆಡ್ ಬಿಎಸ್ಎನ್ಎಲ್ ದೂರವಾಣ ಕರೆಯ ಸಂಪರ್ಕಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಈಗ ಉಂಟಾಗಿರುವ ನೆಟ್ ವರ್ಕ ಸಮಸ್ಯೆಯನ್ನು ಬಗೆಹರಿಸಲು ಕ್ರಮ ವಹಿಸಬೇಕು ಎಂದು ಶಾಸಕರಾದ ಖಂಡ್ರೆ ಅವರು ತಿಳಿಸಿದರು.
ಸಮರ್ಪಕ ಕಾರ್ಯ ನಿರ್ವಹಿಸುತ್ತಿಲ್ಲ: ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇವುಗಳ ನಿರ್ವಹಣೆ, ಮೇಲ್ವಿಚಾರಣೆ ಸರಿಯಾಗಿರಬೇಕು ಎಂದು ಶಾಸಕರಾದ ಶರಣು ಸಲಗರ ಅವರು ಸಭೆಗೆ ಸಲಹೆ ಮಾಡಿದರು.
ಪರಿಹಾರಕ್ಕೆ ಪ್ರಸ್ತಾವನೆ: ಜಿಲ್ಲೆಯಲ್ಲಿ ಈ ಹಿಂದೆ ಸುರಿದ ತೀವ್ರ ಮಳೆಯಿಂದಾಗಿ ಮನೆಗಳು ಕುಸಿದಿರುವ ಬಗ್ಗೆ ಮತ್ತು ಬೆಳೆ ಹಾನಿಯ ಪರಿಹಾರಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸಭೆಗೆ ತಿಳಿಸಿದರು.
ಮಕ್ಕಳಲ್ಲಿ ಜಾಗೃತಿ ಮೂಡಿಸಿ: ಹಾಸ್ಟೇಲ್ ಆರಂಭವಾದರೂ ಶಾಲೆಗೆ ಮಕ್ಕಳು ಬಾರದೇ ಇರುವುದನ್ನು ಗಂಭೀರವಾಗಿ ಪರಿಗಣ ಸಿ, ನಿರ್ಲಕ್ಷ್ಯ ವಹಿಸುವವರಿಗೆ ನೋಟೀಸ್

ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಬಿಸಿಎಂ ಅಧಿಕಾರಿಗೆ ಸೂಚಿಸಿದರು.
ನೊಟೀಸ್ ನೀಡಿದರೂ ಕೆರೆ ಒತ್ತುವರಿ: ಬೀದರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪದೇಪದೆ ನೊಟೀಸ್ ನೀಡಿದರೂ ನಗರದ ವಿವಿಧೆಡೆಯಲ್ಲಿ ಅನಧೀಕೃತವಾಗಿ ಲೇಔಟಗಳ ನಿರ್ಮಾಣ ಕಾರ್ಯ ಮತ್ತು ಕೆರೆಗಳ ಒತ್ತುವರಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಅವರು ಸಭೆಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು ೧೮,೩೯೧ ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ನಡೆಯುತ್ತಿದೆ ಎಂದು ಸಭೆಗೆ ವಸತಿ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಇನ್ನೀತರರು ಇದ್ದರು.

Latest Indian news

Popular Stories