ಬೀದರ್: ಭಾರೀ ಮಳೆ, ಮಾಂಜ್ರಾ ನದಿಗೆ ಹರಿದು ಬಂದ ನೀರು

ಜಿಲ್ಲೆಯಲ್ಲಿನ ಮಾಂಜ್ರಾ ನದಿಗೆ ನೆರೆ ಮಹಾರಾಷ್ಟ್ರ ಭಾಗದಲ್ಲಿ ಸುರಿದ ಭಾರಿ ಮಳೆಗೆ ಅಪಾರ ನೀರು ಹರಿದುಬರುತ್ತಿದ್ದು, ಮಂಗಳವಾರ ನದಿ ತನ್ನ ಒಡಲು ತುಂಬಿಕೊಂಡು ಹರಿಯಲಾರಂಭಿಸಿದೆ.

ನೆರೆ ರಾಜ್ಯದ ಲಾತುರ್, ಉಸ್ಮಾನಾಬಾದ, ಬಿಡ, ಸೋಲಾಪುರ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿರುವ ಹಿನ್ನೆಲೆ ಬತ್ತಿ ಹೋಗಿದ್ದ ಮಾಂಜ್ರಾ ನದಿಯಲ್ಲಿ ನೀರಿನ ಶೇಖರಣಾ ಪ್ರಮಾಣ ಹೆಚ್ಚಾಗಿದೆ.

ಹವಾಮಾನದ ಇಲಾಖೆಯ ಸೂಚನೆಯಂತೆ ಇನ್ನು ಎರಡು ದಿನ ಹೆಚ್ಚಿನ ಮಳೆ ಸುರಿದರೆ, ನೀರಿನ ಹರಿವಿನ ಪ್ರಮಾಣ ಇನ್ನೆರಡು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬರದ ಛಾಯೆಯಲ್ಲಿ ಮುಳುಗಿದ್ದ ಬೀದರ್ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಳೆಗೆ ಮನೆ ಗೋಡೆ ಕುಸಿತ: ಜಿಲ್ಲೆಯ ಹುಲಸೂರು ತಾಲ್ಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಮುಚಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಿಂಬಾಪುರ ಗ್ರಾಮದ ಫಾತಿಮಾ ಜಾನಿಮಿಯ್ಯ ಅವರ ಮನೆ ಗೋಡೆ ಕುಸಿದಿದೆ. ಸ್ಥಳಕ್ಕೆ ಪಿಡಿಒ, ಗ್ರಾಮಲೆಕ್ಕಿಗರು ಪರಿಶೀಲನೆ ನಡೆಸಿದರು.

Latest Indian news

Popular Stories