Bidar

ಶಾಸಕ ಬಂಡೆಪ್ಪ ಖಾಶೆಂಪುರ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ಮಹಿಳೆಯರು, ಯುವ ಮುಖಂಡರು

ಬೀದರ್ (ಫೆ.27): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಮಠಾಣಾ, ನೆಲವಾಳ, ಬಗದಲ್ ಬಿ ತಾಂಡ, ಕೋಳಾರ ಸೇರಿದಂತೆ ವಿವಿಧ ಗ್ರಾಮಗಳ ಯುವ ಮುಖಂಡರು, ಸಂಗೊಳಗಿ ತಾಂಡದ ಯುವಕರು ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತೊರೆದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.


ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಸೋಮವಾರ ಬೆಳಗ್ಗೆ ಜೆಡಿಎಸ್ ಶಾಲು, ಪಕ್ಷದ ಧ್ವಜ ನೀಡುವ ಮೂಲಕ ವಿವಿಧ ಗ್ರಾಮಗಳ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಮಹಿಳೆಯರನ್ನು ಹಾಗೂ ಯುವಕರನ್ನು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡರು.


ಈ ವೇಳೆ ಮಾತನಾಡಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ನಮ್ಮ ಜಾತ್ಯಾತೀತ ಜನತಾದಳ ಪಕ್ಷ ಪ್ರಾದೇಶಿಕ ಪಕ್ಷವಾಗಿದ್ದು, ರೈತರ, ಬಡವರ, ಶ್ರಮಿಕರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ನಮ್ಮ ನಾಡಿನ ಒಳಿತಿಗಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣವೆಂದು ನೂತನವಾಗಿ ಸೇರ್ಪಡೆಯಾದವರಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ನೂತನವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಕಮಠಾಣಾ ಗ್ರಾಮ ಪಂಚಾಯತಿ ಸದಸ್ಯರಾದ ರಾಜಕುಮಾರ ಯಾಬಾ, ಸಂಜುಕುಮಾರ್ ಕ್ಯಾಸ, ಮಲ್ಲಿಕಾರ್ಜುನ ಹೋದಖಣಿ, ವೀರಶೆಟ್ಟಿ ಯಾಬಾ, ನರಸಪ್ಪ ಕೊರವ, ಪಪ್ಪು ಯಾಬಾ, ಸಂಗೊಳಗಿ ಮತ್ತು ಸಂಗೊಳಗಿ ತಾಂಡದ ಶಾಂತಾಬಾಯಿ ಚಂದ್ರಸಿಂಗ್, ಹೇಮಾಬಾಯಿ ಪ್ರಲಾದ್, ಸುಬ್ಬಾಬಾಯಿ ಮಾರುತಿ, ಶಾಂತಬಾಯಿ, ಬಗದಲ್ ತಾಂಡ ಮತ್ತು ಬಗದಲ್ ಗ್ರಾಮದ ಅರವಿಂದ್, ವಸಂತ, ಸತೀಶ್ ರಾಠೋಡ್, ಈರಪ್ಪ, ಸಂಜುಕುಮಾರ್ ಚಾಮಾ, ವೀರಶೆಟ್ಟಿ ಕೋಟೆ, ಮಹಾಂತೇಶ ಹಳೆಂಬೂರ, ವಿಶ್ವನಾಥ ಗೊರಗಿ, ಕಲ್ಲಪ್ಪ ಕೋಟೆ ಸೇರಿದಂತೆ ಅನೇಕರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button