ಜನನ-ಮರಣ ನೋಂದಣಿ ಸಕಾಲಕ್ಕೆ ನಡೆಯಲಿ: ರಾಮಚಂದ್ರನ್ ಆರ್

ಬೀದರ ಜುಲೈ 05 (ಕರ್ನಾಟಕ ವಾರ್ತೆ):-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಜನನ-ಮರಣ ನೋಂದಣಿ ಕಾಯಿದೆ 1969ರ ಕುರಿತು ವಿಚಾರ ಸಂಕೀರಣ ಕಾರ್ಯಕ್ರಮವು ಜುಲೈ 05 ರಂದು ಪೂಜ್ಯ ಶ್ರೀ ಚೆನ್ನಬಸವ ಪಟ್ಟದೇವರು ರಂಗಮAದಿರದಲ್ಲಿ ನಡೆಯಿತು.
ಬೀದರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು ಹಾಗೂ ಇತರರಿಗೆ ನಡೆದ ವಿಚಾರ ಸಂಕೀರಣವನ್ನು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್.ಆರ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಜನನ-ಮರಣ ನೋಂದಣಿ 1969 ಕಾಯಿದೆಯು ಜಾರಿಯಾಗಿ 51 ವರ್ಷಗಳಾಗಿದೆ. ಇಂತಹ ಕಾಯ್ದೆಗಳ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಈ ಕಾಯಿದೆಯ ಮಾಹಿತಿಯು ಪ್ರತಿ ಮನೆ ಬಾಗಿಲಿಗೆ ತಲುಪಬೇಕು. ಜನನ ಮರಣ ನೋಂದಣಿಯು ಸಕಾಲಕ್ಕೆ ಆಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.
ಎಲ್ಲ ಸಾರ್ವಜನಿಕರಿಗೂ ಇಂತಹ ಕಾನೂನುಗಳ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ, ಗೊತ್ತಿಲ್ಲದೇ ಇರುವವರಿಗೆ ಕಾನೂನಿನ ಅರಿವನ್ನು ಕೊಡಬೇಕು. ಜನರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ತಲುಪಬೇಕು ಎನ್ನುವುದು ಘನ ನ್ಯಾಯಾಲಯದ ಮತ್ತು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು. ಇಂತಹ ಕಾನೂನುಗಳನ್ನು ಅರಿತು ಜನರಿಗೆ ಸಕಾಲಕ್ಕೆ ಸೇವೆ ಕೊಡಲು ತಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಅವರು ಮಾತನಾಡಿ, ಒಬ್ಬ ವ್ಯಕ್ತಿಯ ಮರಣದ ನಂತರ ಜೀವ ವಿಮೆ, ವಾರಸಾ, ಆಸ್ತಿ ಹಕ್ಕು ಇತ್ಯರ್ಥ, ಮುಟೇಶನ್‌ನಂತಹ ಸಾಕಷ್ಟು ಪ್ರಕ್ರಿಯೆಗಳು ನಡೆಯುತ್ತವೆ. ಹೀಗಾಗಿ ತಮ್ಮ ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಜನನ ಮತ್ತು ಮರಣ ನೋಂದಣಿ ಸರಿಯಾಗಿ ನಡೆಯುತ್ತಿರುವುದರ ಬಗ್ಗೆ ಪಿಡಿಓ ಮತ್ತು ಗ್ರಾಮ ಲೆಕ್ಕಿಗರು ಗಮನ ಹರಿಸಬೇಕು ಎಂದು ತಿಳಿಸಿದರು. ನಮ್ಮ ಎಲ್ಲಾ ನೀತಿ-ನಿರ್ಧಾರಗಳು ಜನನ ಮತ್ತು ಮರಣದ ನೋಂದಣಿಯ ಆಧಾರದ ಮೇಲೆ ಗುರುತಿಸಲಾಗುತ್ತದೆ. ಜನನ-ಮರಣ ನೋಂದಣಿಯಿAದ ಲಿಂಗಾನುಪಾತ ಮತ್ತು ಭ್ರೂಣ ಹತ್ಯೆಯಂತಹ ಪ್ರಕರಣಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಸಂಖ್ಯಾ ಸಂಗ್ರಹಾಣಧಿಕಾರಿ ಸುವರ್ಣ ಯದಲಾಪೂರೆ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಿಗರು ಜನನ-ಮರಣ ನೋಂದಣಾಧಿಕಾರಿಯಾಗಿರುತ್ತಾರೆ. ಪಿಡಿಓ ಅವರು ವಿತರಣಾಧಿಕಾರಿಯಾಗಿರುತ್ತಾರೆ. ಮೆಡಿಕಲ್ ಆಫೀಸರ್ ಅವರು ಉಪ ನೋಂದಣಾಧಿಕಾರಿಯಾಗಿರುತ್ತಾರೆ ಎಂದು ಮಾಹಿತಿ ನೀಡಿದರು. ದೇಶದ ಜನಸಂಖ್ಯೆಯನ್ನು ಅಂದಾಜಿಸಲು, ತಾಯಿಯ ಗರ್ಭಧಾರಣಾ ಶಕ್ತಿಯನ್ನು ಹಾಗೂ ವಿವಾಹವಾದ ವಯಸ್ಸು ಮತ್ತು ಲಿಂಗಾನುಪಾತದ ಬಗ್ಗೆ ತಿಳಿಯಲಿಕ್ಕೆ, ಜನಗಣತಿಯ ಪ್ರಮುಖ ಅಂಕಿಸAಖ್ಯೆ ಪಡೆಯಲು ಮತ್ತು ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು, ಜಿಲ್ಲಾವಾರು ಮರಣ ಪ್ರಮಾಣವನ್ನು ಕಂಡು ಹಿಡಿಯಲು, ವೈದ್ಯಕೀಯ ಸಂಶೋಧನೆಯAತಹ ಅನೇಕ ಕಾರಣಗಳಿಗಾಗಿ ಜನನ ಮತ್ತು ಮರಣ ನೋಂದಣಿ ಅತೀ ಅವಶ್ಯವಾಗಿದೆ ಎಂದು ಸುವರ್ಣ ಅವರು ತಿಳಿಸಿದರು.
ಜನನವಾಗಲಿ ಮರಣವಾಗಲಿ 21 ದಿನಗಳೊಳಗಡೆ ಉಚಿತವಾಗಿ ನೋಂದಣಿ ಪ್ರಮಾಣ ಪತ್ರ ನೀಡಲಾಗುತ್ತದೆ. 21ರಿಂದ 30 ದಿನಗಳೊಳಗೆ ವಿಳಂಬ ನೋಂದಣಿ ಇರುತ್ತದೆ. 30 ರಿಂದ 1 ವರ್ಷದೊಳಗಡೆ ತಹಸೀಲ್ದಾರ ಮೂಲಕ ನೋಂದಣಾಧಿಕಾರಿಗಳು ಮತ್ತು ಉಪ ನೋಂದಣಾಧಿಕಾರಿಗಳ ಬಳಿಯಲ್ಲಿ ಪ್ರಮಾಣ ಪತ್ರವಿರುತ್ತದೆ. 12 ತಿಂಗಳ ನಂತರ ಸಂಬAಧಪಟ್ಟ ತಹಸೀಲ್ದಾರರ ಹತ್ತಿರ ಇರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ.ಟಿ.ಪಿ ಅವರು ಮಾತನಾಡಿ, ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿದ ನ್ಯಾ.ಹಂಚಾಟೆ ಸಂಜೀವಕುಮಾರ ಅವರ ನಿರ್ದೇಶನದನ್ವಯ ಈ ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಅಗತ್ಯ ಸಹಕಾರ ನೀಡಿವೆ ಎಂದರು.
ಸಮಾರಂಭದಲ್ಲಿ ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಈಶ್ವರ ಮುಸಲ್ಮಾರಿ, ತಹಶೀಲ್ದಾರರಾದ ಗಂಗಾದೇವಿ ಸಿ.ಎಚ್., ರಮೇಶಕುಮಾರ ಪೆದ್ದೆ, ಜಿಲ್ಲಾ ಪಂಚಾಯತ್ ಸಿ.ಪಿ.ಓ ಶರಣಯ್ಯ ಮಠಪತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Latest Indian news

Popular Stories