Bidar

ಬಿಎಸ್‌ಎಸ್‌ಕೆ ಚುನಾವಣೆಯಲ್ಲಿ ಕಲ್ಲೂರ್ ಪೆನಾಲ್‌ಗೆ ಗೆಲುವು

ಬೀದರ್: ಬೀದರ್ ಸಹಕಾರಿ ಸಕ್ಕರೆ ಕಾರಖಾನೆ (ಬಿಎಸ್‌ಎಸ್‌ಕೆ) ಆಡಳಿತ ಮಂಡಳಿ ಚುನಾವಣೆಯಲ್ಲಿ ಹುಮನಾಬಾದ್ ಕ್ಷೇತ್ರದ ಮಾಜಿ ಶಾಸಕ ಸುಭಾಷ ಕಲ್ಲೂರ್ ನೇತೃತ್ವದ ಪೆನಾಲ್ ಭರ್ಜರಿ ಗೆಲುವು ದಾಖಲಿಸಿದೆ. ಕಾರಖಾನೆಯ ಮಾಜಿ ಅಧ್ಯಕ್ಷ ಸಂಜಯ ಖೇಣಿ ನೇತೃತ್ವದ ಪೆನಾಲ್ ಹೀನಾಯ ಸೋಲು ಕಂಡಿದೆ. ಸ್ವತ: ಸಂಜಯ ಖೇಣಿ ಸಹ ಸೋತಿದ್ದಾರೆ. 12 ಸ್ಥಾನಗಳ ಪೈಕಿ ಬರೀ ಎರಡರಲ್ಲಿ ಖೇಣಿ ಪೆನಾಲ್ ಅಭ್ಯರ್ಥಿ ಗೆದ್ದಿದ್ದಾರೆ.
ಸಹಕಾರಿ ಕ್ಷೇತ್ರದ ಈ ಕಾರಖಾನೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿತು. ಒಬ್ಬರು ಮತ್ತೊಬ್ಬರನ್ನು ಮಣಿಸಲು ಚುನಾವಣಾ ತಂತ್ರ ರೂಪಿಸಿದ್ದರು. ಅಂತಿಮವಾಗಿ ಸುಭಾಷ್ ಕಲ್ಲೂರ್ ಅವರು ಕಾರಖಾನೆಯ ರೈತ ಸದಸ್ಯರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 3-4 ತಿಂಗಳಿAದ ಬಿಎಸ್‌ಎಸ್‌ಕೆ ಚುನಾವಣೆ ಸುದ್ದಿಯಲ್ಲಿದೆ. ಚುನಾವಣೆಯನ್ನು ಮುಂದೂಡಲು ಕೆಲವರು ಯತ್ನಿಸಿದರೆ, ಇನ್ನೂ ಕೆಲವರು ಚುನಾವಣೆಯ ಪರವಾಗಿದ್ದರು. ಆದರೆ, ರಾಜ್ಯ ಸರಕಾರ ಮಾತ್ರ ಚುನಾವಣೆ ನಡೆಸುವ ಮನಸ್ಥಿತಿಯಲ್ಲಿ ಇದ್ದಿರಲಿಲ್ಲ. ಹೀಗಾಗಿ ದಿನಾಂಕ ಘೋಷಣೆ ನಂತರ ಚುನಾವಣೆಯನ್ನು ಮುಂದೂಡಿತ್ತು.
ಆದರೆ, ಸಂಜಯ ಖೇಣಿ ಕೋರ್ಟ್ ಮೊರೆ ಹೋಗಿದ್ದರಿಂದ ರಾಜ್ಯ ಸರಕಾರ ಚುನಾವಣೆ ಮುಂದೂಡುವ ಆದೇಶವನ್ನು ಸ್ವತ: ವಾಪಸ್ ಪಡೆಯಬೇಕಾಯಿತು. ಚುನಾವಣಾ ಸಂಬAಧಿ ಕಾನೂನು ಸಮರದಲ್ಲಿ ಸಂಜಯ ಖೇಣಿ ಗೆದ್ದಿದ್ದರು. ಆದರೆ, ಚುನಾವಣೆಯಲ್ಲಿ ಮಾತ್ರ ರೈತ ಮತದಾರರು ಅವರ ಕೈ ಹಿಡಿಯಲಿಲ್ಲ.
ಕಾರಖಾನೆ ಚುನಾವಣೆಯನ್ನು ಸುಭಾಷ ಕಲ್ಲೂರ್, ಮಾಜಿ ಜಿಲ್ಲಾ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮತ್ತಿತರರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಆರೋಪ ಪ್ರತ್ಯಾರೋಪಗಳೂ ನಡೆದಿದ್ದವು. ಕಾರಖಾನೆ ಹಾಳಾಗಲು ಸಂಜಯ ಖೇಣಿ ಕಾರಣ ಎಂದು ಕಲ್ಲೂರ್ ಹಾಗೂ ಬೆಲ್ದಾಳೆ ಆರಂಭಿಸಿದ್ದರು.
ಗೆದ್ದವರು: ಎ ವರ್ಗದ ಕಬ್ಬು ಬೆಳೆಗಾರರ ಕ್ಷೇತ್ರದಿಂದ ಸುಭಾಷ ಕಲ್ಲೂರ್, ಮಲ್ಲಿಕಾರ್ಜುನ ಪಾಟೀಲ್ ಚಿಟಗುಪ್ಪ, ಮಾಣಿಕಪ್ಪ ಸುಭಾಷ, ಬಕ್ಕಪ್ಪ ಶಂಕರೆಪ್ಪ, ವಿಶ್ವನಾಥ ಮಾಣಿಕರಾವ್, ಅಪ್ಪಾರಾವ್ ಇಸ್ಮಾಯಿಲಪ್ಪ, ರಾಜಪ್ಪ ಭರತಣ್ಣ, ಶ್ರೀನಿವಾಸ ರಘುನಾಥರಾವ್, ಅಶೋಕ ಅಮೃತರಾವ್, ಕಲಾವತಿ ಶಿವರಾಜ, ಶೋಭಾ ಮಾಣಿಕರೆಡ್ಡಿ ಗೆದ್ದಿದ್ದಾರೆ.
ಬಿ. ವರ್ಗದ ಕಬ್ಬು ಬೆಳೆಗಾರರಲ್ಲದ ಕ್ಷೇತ್ರದಿಂದ ಸಂಜಯ ಖೇಣಿ ಪೆನಾಲ್‌ನ ದತ್ತಾತ್ರಿ ವಿಶ್ವನಾಥ ದಾಚೇಪಲ್ಲಿ ಆಯ್ಕೆಯಾಗಿದ್ದಾರೆ.
ಇದೀಗ ಚುನಾವಣೆ ಮುಗಿದಿದೆ. ಕಾರಖಾನೆಯನ್ನು ಲೀಸ್ ಕೊಡುವ ಅಥವಾ ಪುನರಾರಂಭಿಸುವ ಜವಾಬ್ದಾರಿ ನೂತನ ಆಡಳಿತ ಮಂಡಳಿ ಹೆಗಲಿಗೇರಿದೆ. ಕಾರಖಾನೆಯನ್ನು ಖಾಸಗಿಯವರಿಗೆ ಲೀಸ್ ಕೊಡುವ ಕುರಿತು ಸರಕಾರ ಹಲವು ಬಾರಿ ಹೇಳಿಕೆ ನೀಡಿದೆ. ಬಿಜೆಪಿ ಮುಖಂಡರೂ ಲೀಸ್ ಕೊಡುವ ಪಕ್ಷದಲ್ಲಿದ್ದಾರೆ. ಸುಭಾಷ್ ಕಲ್ಲೂರ್ ನೇತೃತ್ವದ ಆಡಳಿತ ಮಂಡಳಿಯು ಕಾರಖಾನೆಯನ್ನು ಲೀಸ್ ಕೊಡುತ್ತದೆಯೋ ಅಥವಾ ಸ್ವತ: ಮುನ್ನಡೆಸುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಷ್ಟೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button