
ಡಾ. ರಾಜಕುಮಾರ ಹೆಬ್ಬಾಳೆ ಪರ ಶಕ್ತಿ ಪ್ರದರ್ಶನ
ಬೀದರ: ಸಾಹಿತ್ಯ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಅವರು ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ನಗರದ ಕರ್ನಾಟಕ ಸಾಹಿತ್ಯ ಸಂಘದಿAದ ತಹಸೀಲ್ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಸಾಹಿತಿಗಳು, ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಕಲಾವಿದರು, ಮಹಿಳಾ ಸಾಹಿತಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಡಾ. ಹೆಬ್ಬಾಳೆ ಪರವಾಗಿ ಶಕ್ತಿ ಪ್ರದರ್ಶಿಸಿದರು.
ಇದಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಹಿರಿಯ ಸಾಹಿತು ಪಂಚಾಕ್ಷರಿ ಪುಣ್ಯಶೆಟ್ಟಿ, ಡಾ. ರಾಜಕುಮಾರ ಹೆಬ್ಬಾಳೆಯವರನ್ನು ಗೆಲ್ಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ರಾಜಕುಮಾರ ಒಂದು ಕ್ಷಣ ಕಾಲಹರಣ ಮಾಡದೆ ನಿರಂತರ ಕಲೆ ಮತ್ತು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಾಹಿತ್ಯ ಸಂಘಕ್ಕೆ ಹಾಗೂ ತರಬೇತಿ ಕೇಂದ್ರಕ್ಕೆ ಕೇಂದ್ರದಿAದ ಲಕ್ಷಾಂತರ ರೂಪಾಯಿ ಅನುದಾನ ತಂದಿದ್ದಾರೆ ಎಂದು ಶ್ಲಾಘಿಸಿದರು.
ಡಾ.ರಾಜಕುಮಾರ ಹೆಬ್ಬಾಳೆ ಅವರ ಪರಿಚಯ ಪತ್ರ ನೋಡಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅವರನ್ನು ಕಸಾಪ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದಾಗಿತ್ತು. ಆದರೆ ಈ ಹಿಂದಿನ ಅಧ್ಯಕ್ಷರು ಮಾತಿಗೆ ತಪ್ಪಿದ್ದರಿಂದ ಚುನಾವಣೆ ನಡೆಯುವಂತಾಗಿದೆ ಎಂದು ಪುಣ್ಯಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಡಾ. ರಾಜಕುಮಾರ ಹೆಬ್ಬಾಳೆಯವರು ಈ ಬಾರಿ ಗೆಲ್ಲುತ್ತಿದ್ದಾರೆ. ಬೀದರ ಜಿಲ್ಲೆಯ ಸಾಹಿತಿಗಳನ್ನು ಹಾಗೂ ಕಲಾವಿದರನ್ನು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಪರಿಚಯಿಸುವ ಕಾರ್ಯ ಹೆಬ್ಬಾಳೆ ಮಾಡಿದ್ದಾರೆ. ಕೇವಲ ಕಲೆ ಮತ್ತು ಸಾಹಿತ್ಯ ಮಾತ್ರವಲ್ಲದೆ ಕೋವಿಡ್ ಸಂದರ್ಭದಲ್ಲಿ ತನ್ನ ಪ್ರಾಣಭಯ ತೊರೆದು ಸುಮಾರು 4 ಸಾವಿರ ಗಂಟಲು ದ್ರವ ಪರೀಕ್ಷಿಸಿ, ಸ್ವತಃ ಕೊರೊನಾ ವೈರಸ್ಗೆ ತುತ್ತಾಗಿ ಸಾವು ಗೆದ್ದು ಬಂದಿದ್ದಾರೆ ಎಂದು ಕೊಂಡಾಡಿದರು. ಹುಮನಾಬಾದನ ಸಾಹಿತಿ ಡಾ. ಸೋಮನಾಥ ಯಾಳವಾರ ಅವರು ಮಾತನಾಡಿ,ಸಾಹಿತಿಗಳ ಕಲಾವಿದರ ಸ್ಪೂರ್ತಿಗಂಗೋತ್ರಿಗಳಾದ ವಿನಯಶೀಲ ಡಾ. ರಾಜಕುಮಾರ ಅವರನ್ನು ಸರ್ವರೂ ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಮಾತನಾಡಿ, `ಜವಾಬ್ದಾರಿಯಿಂದ ಸಮಾಜಕ್ಕಾಗಿ ತನ್ನ ಪ್ರಾಣದ ಹಂಗನ್ನು ತೊರೆದು ದುಡಿಯುತ್ತಿರುವ ಡಾ. ರಾಜಕುಮಾರ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಸಾರಥಿಯಾಗಿದ್ದಾರೆ. ಅವರಿಗೆ ಸಂಪೂರ್ಣ ಬೆಂಬಲವಿದೆ ಎಂದರು.
ಅಭ್ಯರ್ಥಿ ಡಾ. ರಾಜಕುಮಾರ ಹೆಬ್ಬಾಳೆ, ರಮೇಶ ಮಠಪತಿ, ವಸಂತ ಹುಣಸನಾಳೆ, ಜೈರಾಜ ಖಂಡ್ರೆ, ಸಿ.ಎಸ್.ಗಣಾಚಾರಿ, ಉಮಾಕಾಂತ ಮೀಸೆ, ರಾಮಕೃಷ್ಣನ್ ಸಾಳೆ, ಪ್ರಕಾಶ ಲಕ್ಕಶೆಟ್ಟಿ, ವೈಜಿನಾಥ ಕಮಠಾಣೆ, ಪ್ರೊ. ಅಶೋಕ ಮೈನಾಳೆ, ಸೂರ್ಯಕಾಂತ ವಲ್ಲೆಪುರೆ, ಶಂಭುಲಿAಗ ಕಾಮಣ್ಣ, ಕಾಶಪ್ಪ ಬಾಲಕಿಲೆ, ಎಚ್.ಕಾಶಿನಾಥರೆಡ್ಡಿ, ಡಾ. ಬಸವರಾಜ ಸ್ವಾಮಿ, ಪ್ರೊ. ಎಸ್.ಬಿ.ಬಿರಾದಾರ, ಡಾ. ಜಗನ್ನಾಥ ಹೆಬ್ಬಾಳೆ, ಸಂಜೀವಕುಮಾರ ಜುಮ್ಮಾ ಮತ್ತಿತರರು ಪಾಲ್ಗೊಂಡಿದ್ದರು.




