ಬೀದರ್ : ಕೋಲ್ಕತ್ತದ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ

ಬೀದರ್: ಜಿಲ್ಲೆಯ ಕಮಲನಗರ ತಾಲ್ಲೂಕಿನ ವಿವಿಧೆಡೆ ಅನಧಿಕೃತವಾಗಿ ಕೋಲ್ಕತ್ತದ ನಕಲಿ ವೈದ್ಯರು ನಡೆಸುತ್ತಿದ್ದ ಮೂರು ಕ್ಲಿನಿಕ್‌ ಹಾಗೂ ಒಂದು ಲ್ಯಾಬೊರೇಟರಿ ಮೇಲೆ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಕಲಿ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್‌ ಹಾಗೂ ಲ್ಯಾಬೊರೇಟರಿಗಳನ್ನು ಮುಚ್ಚಿಸಲಾಗಿದೆ. ಕೆ.ಪಿ.ಎಂ.ಇ. ಕಾಯ್ದೆ ಪ್ರಕಾರ ನೋಂದಣಿ ಮಾಡದೆ ನಡೆಸುತ್ತಿದ್ದ ಎರಡು ಕ್ಲಿನಿಕ್‌ಗಳವರಿಗೆ ನೋಂದಣಿ ಮಾಡಿಸುವಂತೆ ನೋಟಿಸ್‌ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ದಿಲೀಪ ಡೊಂಗ್ರೆ ತಿಳಿಸಿದ್ದಾರೆ.

ದಾಳಿ ನಡೆಸಿದ ತಂಡ:

ಔರಾದ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಗಾಯತ್ರಿ, ಕೆ.ಪಿ.ಎಂ.ಇ ವಿಷಯ ನಿರ್ವಾಹಕ ಮಹೇಶ್ವರ್ ರೆಡ್ಡಿ, ಗ್ರುಪ್‌ ‘ಡಿ’ ನೌಕರ ಯಾಸೀನ್ ಖಾನ್, ಕಮಲನಗರ ಪಿಎಸ್ಐ ಮಾಣಿಕರಾವ್ ಪಾಟೀಲ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.

ಇದೇ ರೀತಿ ನಕಲಿ ವೈದ್ಯರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನೇರವಾಗಿ ಭೇಟಿ ನೀಡಿ ಅವೈಜ್ಞಾನಿಕ ರೀತಿಯಲ್ಲಿ ಚಿಕ್ಸಿತೆ ನೀಡುತ್ತಿದ್ದು ಕೂಡಲೇ ಕಡಿವಾಣ ಹಾಕಬೇಕೆಂದು ಎಂಬುವುದು ಸಾರ್ವಜನಿಕರ ಅಭಿಪ್ರಾಯ

ಹನಮಂತ ದೇಶಮುಖ
THG BIDAR

Latest Indian news

Popular Stories