ಶಾಲೆಗಳಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪ್ರಕರಣ ತಡೆಯಲು ಬಿಇಓ, ಶಾಲಾ ಮುಖ್ಯಸ್ಥರಿಗೆ ಡಿಡಿಪಿಐ ಸೂಚನೆ

ಬೀದರ ಅಗಸ್ಟ್ 20 (ಕರ್ನಾಟಕ ವಾರ್ತೆ): ಬೀದರ್ ಜಿಲ್ಲೆ ಶಾಲೆಗಳಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪ್ರಕರಣಗಳನ್ನು ತಡೆಗಟ್ಟಲು ನಿಮಾನುಸಾರ ಸೂಕ್ತ ಕ್ರಮ ಜರುಗಿಸಲು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಸಂಬAಧಪಟ್ಟ ಶಾಲಾ ಮುಖ್ಯಸ್ಥರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಬೀದರ ಜಿಲ್ಲೆಯಲ್ಲಿ ಮೇಲ್ಜಾತಿಯ ಜನಾಂಗಕ್ಕೆ ಸೇರಿದ ಕೆಲ ವ್ಯಕ್ತಿಗಳು ವ್ಯವಸ್ಥಿತವಾಗಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾನೂನು ಬಾಹೀರವಾಗಿ ತಮ್ಮ ಮಕ್ಕಳ ಶಾಲಾ ಪ್ರವೇಶದ ಸಂದರ್ಭದಲ್ಲಿ ಯಾವುದೇ ದಾಖಲಾತಿಗಳು ಇಲ್ಲದೆ ಶಾಲಾ ದಾಖಲಾತಿಯಲ್ಲಿ ನಕಲಿ ನಮೂದನ್ನು ನಮೂದಿಸಿ ತಳಮಟ್ಟದ ಸಮುದಾಯದ ಮಿಸಲಾತಿಯನ್ನು ಕಬಳಿಸುತ್ತಿದ್ದಾರೆ.
ಶಾಲಾ ಮುಖ್ಯಗುರುಗಳು ದಾಖಲೆಗಳನ್ನು ಪರಿಶೀಲಿಸದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶಗಳನು ಗಾಳಿಗೆ ತೂರಿ ಮೇಲ್ಜಾತಿಯ ಜನರಿಗೆ ಮೀಸಲಾತಿ ಕಬಳಿಸಲು ಬೆಂಬಲವನ್ನು ನೀಡುತ್ತಿರುವುದು, ಜಿಲ್ಲೆಯಲ್ಲಿ ಕೆಲವು ಶಾಲೆಗಳ ಶಾಲಾ ದಾಖಲಾತಿಗಳಲ್ಲಿ ನಮೂದಿಸಿರುವುದು ಕಂಡು ಬಂದಿರುತ್ತದೆ. ಇಂತಹ ನಕಲಿ ನಮೂದುಗಳನ್ನು ರದ್ದುಪಡಿಸಿ ಶಾಲೆಯ ಮುಖ್ಯಗುರುಗಳ ವಿರುದ್ಧ ಕ್ರಮಕೈಗೊಂಡು ಮುಂದೆ ಇಂತಹ ಪ್ರಕರಣಗಳನ್ನು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಮಿತಿಯೊಂದು ಮನವಿ ಮಾಡಿದೆ.
ಹೀಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬAಧಪಟ್ಟ ಶಾಲಾ ಮುಖ್ಯಸ್ಥರು ಈ ವಿಷಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬೀದರ ಜಿಲ್ಲೆಯ ಶಾಲೆಗಳಲ್ಲಿ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪ್ರಕರಣಗಳನ್ನು ತಡೆಗಟ್ಟಲು ನಿಮಾನುಸಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕರು(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories