ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ ಹೃದಯ ಸಂಬAಧಿ ಚಿಕಿತ್ಸೆ

ಗುದಗೆ ಆಸ್ಪತ್ರೆಯ ಕ್ಯಾಥಲ್ಯಾಬ್ ಜಿಲ್ಲೆಯ ಪಾಲಿಗೀಗ ದಿವ್ಯ ಸಂಜೀವಿನಿ
ಬಿ.ಪಿ.ಎಲ್ ಕಾರ್ಡ್ಗೆ ಫ್ರೀ, ಎ.ಪಿ.ಎಲ್ ಕಾರ್ಡ್ಗೆ ರಿಯಾಯಿತಿ ದರದಲ್ಲಿ ಎಂಜಿಯೊಗ್ರಾಫಿ, ಎಂಜಿಯೊಪ್ಲಾಸ್ಟಿ ಚಿಕಿತ್ಸೆ

ಪತ್ರಕರ್ತರಿಗೂ, ಸರ್ಕಾರಿ ನೌಕರರಿಗೂ ಉಚಿತ ಹೃದಯ ಸಂಬAಧಿ ಚಿಕಿತ್ಸೆ
ಬೀದರ್: ನಗರದ ಪ್ರತಿಷ್ಠಿತ ಆಸ್ಪತ್ರೆ ಎನಿಸಿದ ಗುದಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿಜಕ್ಕೂ ಎಲ್ಲ ರೋಗಗಳಿಗೆ ವಾಸಿ ಮಾಡುವ ಮೂಲಕ ಜಿಲ್ಲೆಯ ಪಾಲಿಗೆ ಈಗ ಸಂಜೀವಿನಿಯಾಗಿ ಮಾರ್ಪಟ್ಟಿದೆ. ಸಾಮಾನ್ಯ ರೋಗಗಳಿಂದ ಹಿಡಿದು ಭೀಕರ ಕಾಯಿಲೆಗಳನ್ನು ವಾಸಿ ಮಾಡುವ ಮೂಲಕ ಜಿಲ್ಲೆಯ ಜನರನ್ನು ಹೆಚ್ಚು ದುಂದು ವೆಚ್ಚದಿಂದ ಹಾಗೂ ದೂರ ತೆರಳುವ ಅನಿವಾರ್ಯತೆಯಿಂದ ಮುಕ್ತಗೊಳಿಸಲು ಈ ಆಸ್ಪತ್ರೆ ಈಗ ಟೊಂಕ ಕಟ್ಟಿ ನಿಂತಿದೆ.
ಜಿಲ್ಲೆಯ ಬಿ.ಪಿ.ಎಲ್ ಕಾರ್ಡ್ ಹೊಂದಿದ ಹೃದಯ ಸಂಬAಧಿ ರೋಗಿಗಳಿಗೆ ಪುಕ್ಕಟ್ಟೆ ರೂಪದಲ್ಲಿ, ಹಾಗೇ ಎ.ಪಿ.ಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಎಂಜಿಯೊಗ್ರಾಫಿ ಹಾಗೂ ಎಂಜಿಯೊಪ್ಲಾಸ್ಟಿ ಮಾಡಲಾಗುತ್ತಿದೆ. ಹಾಗೇ ಜ್ಯೋತಿ ಸಂಜೀವಿನಿ ಯೋಜನೆಯ ಲಾಭ ಪಡೆಯುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೂ ಹಾಗೂ ಮಾನ್ಯತೆ ಕಾರ್ಡ್ ಜೊತೆಗೆ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿದ ಪತ್ರಕರ್ತರಿಗೆ ಹೃದಯ ಸಂಬAಧಿ ಕಾಯಿಲೆಗಳಿಗೆ ಇಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಮೇಲೆ ತಿಳಿಸಿದ ಫಲಾನುಭವಿಗಳಿಗೆ ಈ ಸೌಲತ್ತು ಒದಗಿಸಲು ಗುದಗೆ ಆಸ್ಪತ್ರೆಗೆ ಅನುಮತಿ ನೀಡಿದ್ದು, ಜಿಲ್ಲೆಯ ಆರ್ಥಿಕ ದುರ್ಬಲರಿಗೆ ಇದು ನಿಜವಾದ ವರದಾನವಾದಂತಿದೆ.
ಬೆAಗಳೂರು ಹಾಗೂ ಮೈಸೂರಿನ ಜಯದೇವ ಹೃದಯರೋಗ ಆಸ್ಪತ್ರೆಯಲ್ಲಿ ಸುಮಾರು ಎರಡು ಸಾವಿರ ಎಂಜಿಯೊಗ್ರಾಫಿ ಹಾಗೂ ಎಂಜಿಯೊಪ್ಲಾಸ್ಟಿ ಮಾಡಿ ಭೇಷ್ ಎನಿಸಿಕೊಂಡಿರುವ ಪರಿಣ ತ ಹೃದಯರೋಗ ತಜ್ಞರಾದ ಡಾ.ನಿತಿನ್ ಚಂದ್ರಕಾAತ ಗುದಗೆ ಈಗ ವಾರದ ಎಳು ದಿನಗಳು ಹಾಗೂ ದಿನದ ಇಪ್ಪತ್ತನಾಲ್ಕು ಗಂಟೆ ಇಲ್ಲಿ ಲಭ್ಯವಿರುವರು. ಶೇಕಡ ೯೦ ರಷ್ಟು ಹೃದಯ ರೋಗಿಗಳು ಸಾವಿನ ದವಡೆಯಲ್ಲಿ ಸಿಕ್ಕು ಒದ್ದಾಡುವವರಿಗೆ ಚಿಪ್ ಎಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಿ ಮರುಜನ್ಮ ನೀಡುವ ಕೌಶಲ್ಯನಿಪುಣರಾಗಿ ಡಾ.ನಿತಿನ್ ಹೊರಹೊಮ್ಮಿದ್ದಾರೆ. ಇತ್ತೀಚಿಗೆ ಸಿಂದೋಲ ತಾಂಡಾದ ಹೃದಯರೋಗಿ ಗಣೇಶ ರಾಠೋಡ್ ಎಂಬಾತನಿಗೆ ಚಿಪ್ ಎಂಜಿಯೊಪ್ಲಾಸ್ಟಿ ಚಿಕಿತ್ಸೆ ನೀಡಿ ಸಾವಿನ ದವಡೆಯಿಂದ ಪಾರು ಮಾಡುವ ಮೂಲಕ ಜಿಲ್ಲೆಯ ಚೊಚ್ಚಲ ಚಿಪ್ ಎಂಜಿಯೊಪ್ಲಾಸ್ಟಿ ಯಶಸ್ವಿ ಚಿಕಿತ್ಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಗೌರಿ ಗಣೇಶ ಹಬ್ಬದಂದು ಬಿ.ಪಿ.ಎಲ್ ಕಾರ್ಡ್ ಹೊಂದಿದ ಹುಮನಾಬಾದ್ ತಾಲ್ಲೂಕಿನ ನಂದಗಾವ್ ಗ್ರಾಮದ ಮಹಾಂತೇಶ ಎಂಬ ಹೃದ್ರೋಗಿಗೆ ಉಚಿತ ಸ್ಟಂಟ್ ಅಳವಡಿಸುವ ಮೂಲಕ ಬಡಜನರ ಈ ಉಚಿತ ಹೃದಯ ಚಿಕಿತ್ಸೆ ಸೇವೆಗೆ ಶುಭ ಹೇಳಲಾಯಿತು.
ಕ್ಯಾಥಲ್ಯಾಬ್‌ಗೆ ಸಂಬAಧಿಸಿದ ಅತ್ಯಾಧುನಿಕ ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನ ವ್ಯವಸ್ಥೆ ಜೊತೆಗೆ ನುರಿತ ತಂತ್ರಜ್ಞರ ತಂಡ ಈಗ ಗುದಗೆ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಇದು ಆಸ್ಪತ್ರೆಯ ಶ್ರೇಯಸ್ಸಿಗೆ ಹೊಸ ಮೈಲಿಗಲ್ಲಾಗಿ ಪರಿಣಮಿಸಿದೆ.
ಜಿಲ್ಲೆಯ ಬಡಜನರ, ಸರ್ಕಾರಿ ನೌಕರರ ಹಾಗೂ ಪತ್ರಕರ್ತರ ಸೇವೆ ಮಾಡುವ ಮಹತ್ವಾಕಾಂಕ್ಷಿ ಉದ್ದೇಶ ಬಹಳ ದಿನದಿಂದ ನನ್ನಲ್ಲಿತ್ತು. ಅದನ್ನು ರಾಜ್ಯ ಸರ್ಕಾರ ಈಗ ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆ ಅಡಿ ನನ್ನ ಮಹತ್ತರ ಕನಸು ನನಸು ಮಾಡಲು ಮುಂದಾಗಿದೆ. ಆಕ್ರಿಡಿಟೇಷನ್ ಕಾರ್ಡ್ ಜೊತೆಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿದ ಪತ್ರಕರ್ತರಿಗೆ, ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ, ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸಂಪೂರ್ಣ ಉಚಿತವಾಗಿ ಮತ್ತು ಎ.ಪಿ.ಎಲ್ ಕಾರ್ಡ್ದಾರರಿಗೂ ಡಿಸ್ಕೌಂಟ್ ದರದಲ್ಲಿ ಸ್ಟಂಟ್ ಅಳವಡಿಕೆ ಜೊತೆಗೆ ಎಲ್ಲ ರೀತಿಯ ಹೃದಯ ಸಂಬAಧಿ ಚಿಕಿತ್ಸೆ ನೀಡುವ ಸೌಭಾಗ್ಯ ನಮಗೆ ದೊರಕಿರುವುದು ನಿಜಕ್ಕೂ ಸಂತೋಷವೆನಿಸಿದೆೆ.

Latest Indian news

Popular Stories