ಕೋವಿಡ್-೧೯, ೨ನೇ ಅಲೆ, ವಿವೇಕ ದೀಪಕ ವಾಲಿ ಫೌಂಡೇಶನ್‌ದಿAದ ಉಚಿತ ಮಾಸ್ಕ್ ವಿತರಣೆ, ಮಾಸ್ಕ್ ಧರಿಸಬೇಕು -ಸಿದ್ದಣ್ಣಾ ಯಳಸಂಗಿ

ಬೀದರ್,ಏ.೮:- ಕರೋನಾ ವೈರಸ ಮಹಾಮಾರಿ ಮತ್ತೋಮ್ಮೆ ೨ನೇ ಹಂತಕ್ಕೆ ಮರಳಿದ ಪರಿಣಾಮವಾಗಿ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ.

ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಮತ್ತು ಅವರ ಜೊತೆ ಇರುವ ಜೊತೆಗಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ೬ಅಡಿ ಸಮಾಜಿಕ ಅಂತರ ಕಾಪಡಬೇಕು. ಸೋಪು ಮತ್ತು ಸಾನಿಟೈಜರ್ ಬಳಕೆ ಮಾಡಲೇಬೇಕು ಅಂದಾಗ ಮಾತ್ರ ಈ ಮಹಾಮಾರಿಯ ವಿರುದ್ಧ ಜಯಗಳಿಸಬಹುದಾಗಿದೆ ಎಂದು ಭಾರತ ಸೇವಾದಳದ ಬೀದರ ಜಿಲ್ಲಾ ಸಂಘಟಿಕರಾದ ಸಿದ್ಧಣ್ಣಾ ಯಳಸಂಗಿ ಅವರು ಎ.ಎನ್.ಎಂ. ಸಿಸ್ಟರಗಳಿಗೆ ಕರೆ ನೀಡಿದರು.

IMG 20210408 122232 Bidar

ಅವರು ಇಂದು ೮-೪-೨೦೨೧ರಂದು ಬೆಳಗ್ಗೆ ೧೧.೫೯ ಗಂಟೆಗೆ ಬೀದರ ನಗರದ ಹಳೆ ಪ್ರದೇಶದಲ್ಲಿರುವ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಗೆ ಸಿಬ್ಬಂದಿಗಳಿಗೆ ಎ.ಎನ್. ಎಂ.

ಸಿಸ್ಟರ್‌ಗಳಿಗೆ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಹೋರರೋಗಿಗಳಿಗೆ ಮತ್ತು ಕೋವಿಡ್ -೧೯ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿರುವ ಹಾಕಿಸಿಕೊಂಡಿರುವ ಜನರಿಗೆ ವಿವೇಕ ದೀಪಕ ವಾಲಿ ಪೌಂಡೇಶನ್ ವಿವೇಕ ದೀಪಕ ವಾಲಿ ಅಭಿಮಾನಿ.

ಬಳಗದವತಿಯಿಂದ ಉಚಿತವಾಗಿ ಮಾಸ್ಕ್ ವಿತರಣೆ ಮಾಡಿ ಮಾತನಾಡುತ್ತಿದ್ದರು. ೨ನೇ ಹಂತದ ಈ ಸಮರದಲ್ಲಿ ವೈದ್ಯರು ಎಎನ್.ಎಂಗಳು ಸಮರ ಸೇನಾನಿಗಳಾಗಿ ದುಡಿಯುತ್ತಿರುವುದಕ್ಕೆ ಪ್ರತಿಯೊಬ್ಬರು.

ಆಸ್ಪತ್ರೆ ಎಲ್ಲಾ ಸಿಬ್ಬಂದಿ üಸೇವಕರುಗಳಿಗೆ ವೈದ್ಯರಿಗೆ ಅಭಿನಂದನೆ ಹೇಳಬೇಕು ಎಂದರು. ಈ ಆಸ್ಪತ್ರೆಯಲ್ಲಿ ಮತ್ತು ಇತರೆ ಪ್ರದೇಶಗಳಲ್ಲಿನ ಆಯ್ದ ಜನರಿಗೆ ಸುಮಾರು ೫೦೦ಕ್ಕೂ ಹೆಚ್ಚು ಜನರಿಗೆ ಉಚಿತ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು.

ಬಳಗದ ಪುಷ್ಪಕ ಜಾಧವ, ಸಾಯಿ ವಿಜಯಕುಮಾರ ವಡ್ಡೆ ಯರನಳ್ಳಿ, ಸಂತೋಷ ವಡ್ಡೆ, ನಾಗಶೆಟ್ಟಿ ಧರಮಾಪೂರ, ಶಿಕ್ಷಕರ ಸಂಘದ ಪ್ರಮುಖ ಶಿವರಾಜ ಕಪಲಾಪೂರೆ, ಜ್ಞಾನೋಬಾರಾವ ಶೇಂದ್ರೆ, ವೈದ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು ಶ್ರೀಮತಿ ಶಕುಂತಲಾ ಶಿವರಣಪ್ಪಾ.

ವಾಲಿ ಅವರ ಜನ್ಮದಿನದ ನಿಮ್ಮಿತ್ತವಾಗಿ ಉಚಿತವಾಗಿ ಮಾಸ್ಕ್ ಗಳನ್ನು ವಿತರಣೆ ಮಾಡಿದ್ದು ಮಾಸ್ಕ್ ಪಡೆದವರು ಪ್ರತಿಯಾಗಿ ಶ್ರೀಮತಿ ಶಕುಂತಲಾ ವಾಲಿಯವರ ಕುಟುಂಬಕ್ಕೆ ಶುಭಹಾರೈಸಿದರು.
ಧನ್ಯವಾದಗಳೊಂದಿಗೆ
ಇAತಿ ನಿಮ್ಮ ವಿಶ್ವಾಸಿ
ಸಿದ್ದಣ್ಣಾ ಯಳಸಂಗಿ
ಬೀದರ ಜಿಲ್ಲಾ ಸಂಘಟಕರು ಭಾರತ ಸೇವಾದಳ
ಮೋ. 9980423233

Latest Indian news

Popular Stories