ದಕ್ಷಿಣ ಕ್ಷೇತ್ರದ ಬಂಬೂಳಗಿ ಗ್ರಾಮದ ಹಿರಿಯರು ಯುವಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆ

ಬೀದರ್: ದಕ್ಷಿಣ ಕ್ಷೇತ್ರದ ಬಂಬೂಳಗಿ ಗ್ರಾಮದ ಹಿರಿಯರು ಯುವಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಮಂಡಲದ ಅಧ್ಯಕ್ಷರಾದ ರಾಜರೆಡ್ಡಿ ಶಹಾಬಾದ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಪಕ್ಷದ ಧ್ವಜ ನೀಡಿ ಬರಮಾಡಿಕೊಂಡು ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ ಬಿಜೆಪಿ ಪಕ್ಷದ ಅಧಿಕಾರದಲ್ಲಿ ರಾಜ್ಯಾದ್ಯಂತ ಆಗುತ್ತಿರುವ ಗ್ರಾಮಗಳ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ನಮ್ಮ ಪಕ್ಷಕ್ಕೆ
ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಕಾರ್ಯ ಕರ್ತರು ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೆ ನನ್ನ ಅಧಿಕಾರದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು.

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಜನರಿಗೆ ಯಾವುದೇ ಕೆಲಸಗಳು ಆಗುವುದಿಲ್ಲ. ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುವುದೇ ಕಾಂಗ್ರೆಸ್ ಪಕ್ಷದ ಕೆಲಸವಾಗಿದೆ. ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಪಕ್ಷದವರು ಸಹಿಸಿಕೊಳ್ಳುತ್ತಿಲ್ಲ. ಮತ್ತೆ ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಅವರಿಗೆ ಭಯಶುರುವಾಗಿದೆ ಎಂದರು.

ಪ್ರಮುಖರಾದ.ಸನ್ಮುಖಪ್ಪ ಶೇಖಾಪೂರ,ರವಿ ಬಾಲೇಬಾಯಿ, ಶಿವು ದೇಶಪಾಂಡೆ,ವೀರಶೆಟ್ಟಿ ಮೂಲಗಿ, ರಾಹುಲ್ ಅಷ್ಟೂರ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ 30 ಕ್ಕಿಂತ ಹೆಚ್ಚಿನ ಯುವಕರು ಪಕ್ಷ ಸೇರ್ಪಡೆಗೊಂಡರು, ಈರಪ್ಪ ಪೂಜಾರಿ, ನೀಲಕಂಠ,ರವಿ ಯಾಕತಪೂರ ಗಣೇಶ ಅರ್ಕಿ, ಜಗನ್ನಾಥ್, ರಘುನಾಥ್, ನಿರಂಜನ್, ಲೊಕೇಶ ಅನೀಲ್ ಶಿವಶರಣಪ್ಪ ಔಂಟಿ,ಸಿದ್ದು , ಪ್ರಶಾಂತ್,ಭಿಮಷಾ, ಸುಧೀರ್, ಈರಣ್ಣ, ಸುಭಾಷ್, ಪ್ರಭು ಅಮರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಪ್ರತಿಯೊಂದು ಗ್ರಾಮದ ನಮ್ಮ ಪಕ್ಷದ
ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿ
ಸಾರ್ವಜನಿಕರ ತೊಂದರೆಗಳನ್ನು ಬಗ್ಗೆ ಹರಿಸಬೇಕು ನಿಮ್ಮ ಕೈಯಲ್ಲಿ ಆಗದ ಕೆಲಸ ನನ್ನ ಗಮನಕ್ಕೆ ತರಬೇಕು ನಾನು ಅವರ ಸಮಸ್ಯೆಗೆ ಪರಿಹಾರ ನೀಡುತ್ತೇನೆ.

-ಡಾ.ಶೈಲೇಂದ್ರ ಬೆಲ್ದಾಳೆ

Latest Indian news

Popular Stories