ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ

ಬೀದರ, ಆ. ೨೪ಃ ರಾಜ್ಯ ಸರ್ಕಾರ ೨೦೨೦ರ ನವೆಂಬರ್ ೧ ರಿಂದ ೨೦೨೧ರ ಅಕ್ಟೋಬರ್ ೩೧ರವರೆಗಿನ ಅವಧಿಯನ್ನು ಕನ್ನಡ ಕಾಯಕ ವರ್ಷ ಎಂದು ಘೋಷಣೆ ಮಾಡಿದೆ. ಕನ್ನಡ ಜಾಗೃತಿ ಅಭಿಯಾನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರಾಜ್ಯಾದ್ಯಂತ ಕನ್ನಡ ಜಾಗೃತಿ ಅನುಷ್ಠಾನಕ್ಕಾಗಿ ದುಡಿಯುತ್ತಿದೆ. ಕನ್ನಡ ಜಾಗೃತಿ ಅಭಿಯಾನದ ನಿಮಿತ್ತವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಸದಸ್ಯರಾದ ವಿಜಯಕುಮಾರ ಸೋನಾರೆ ಅವರ ನೇತೃತ್ವದಲ್ಲಿ ದಿನಾಂಕ ೨೪ ರಂದು ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಕುರಿತು ಬೀದರ ನಗರದ ವಿಮಾನ ನಿಲ್ದಾಣದ ಪ್ರಭಾರಿ ಅಧಿಕಾರಿ ಅಮಿತಕುಮಾರ ಮಿಶ್ರಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಾರಿಗೆ ವಲಯದ ಮುಖೇನ ಇಂದು ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ-ನಿರ್ಗಮನ, ವಲಸೆ ಹೆಚ್ಚುತ್ತಿದೆ. ಸಾರಿಗೆ ವಲಯದಲ್ಲಿಯೂ ಕನ್ನಡ ಭಾಷೆ ಕುಂದದೇ ಗಟ್ಟಿಯಾಗಿ ನೆಲೆಯಾಗಬೇಕು. ಟಿಕೆಟ್, ಬಸ್, ಮೇಟ್ರೋದಂತಹ ಬೆರಳಣ ಕೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು ಬಳಸಬೇಕು. ಈ ಉದ್ದೇಶಕ್ಕಾಗಿ ಕನ್ನಡಿಗರೆಲ್ಲರೂ ಬದ್ಧರಾಗಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡುತ್ತ, ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ದಿವಂಗತ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಗಷ್ಟ ೨೦ ರಂದು ಜನ್ಮ ದಿನದ ಅಂಗವಾಗಿ ಸಾರಿಗೆ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರಿಗೆ ವಲಯವೆಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ.), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ.ಎಂ.ಟಿ.ಸಿ.), ಮೆಟ್ರೋ, ಬೇಂದ್ರೆ ಸಾರಿಗೆ, ಖಾಸಗಿ ಬಸ್, ಇತರೆ ಸಾರಿಗೆ ವ್ಯವಸ್ಥೆ, ಆಟೋ, ಕ್ಯಾಬ್ (ಒಲಾ, ಉಬರ್) ಸೇರಿದಂತೆ ಇತರೆ ಖಾಸಗಿ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಆಗಷ್ಟ ೨೩,೨೪ ಮತ್ತು ೨೫ ರಂದು ಕನ್ನಡ ಬಳಕೆ ಜಾಗೃತಿ ಅಭಿಯಾನ ಪ್ರಾಧಿಕಾರವು ಹಮ್ಮಿಕೊಂಡಿದೆ ಎಂದರು.
ಸಾರಿಗೆ ವಲಯದಲ್ಲಿಯೂ ಕನ್ನಡ ರಾರಾಜಿಸಲಿ, ಕನ್ನಡ ನಾಡಿನಲ್ಲಿ ನೆಲೆಸಿದವರು ಕನ್ನಡದಲ್ಲೇ ಮಾತು ಸಂವಹನ ನಡೆಸುವಷ್ಟು ಕನ್ನಡ ಕಲಿತು ಮಾತಾಡಬೇಕು. ಈ ಸದಾಶಯ, ಸದ್ದೇಶವೇ ಈ ಮನವಿ ಪತ್ರದ ಮೂಲ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತಿ ಅಭಿಯಾನದ ಸುನೀಲ ಭಾವಿಕಟ್ಟಿ, ಎಂ.ಪಿ. ಮುದಾಳೆ, ರವಿ ಕಾಂಬಳೆ, ಭಾಗಪ್ಪ ಹರಿಜನ, ವಿಮಾನ ನಿಲ್ದಾಣದ ಸುರೇಂದ್ರ, ಅಭಿಷೇಕ, ಅಶೋಕ ಅವರು ಸೇರಿದಂತೆ ಇತರರು ಇದ್ದರು

Latest Indian news

Popular Stories