ಮೋದಿ “ಒಬ್ರೆ” ಬಾದ್’ಶಾ ಆಗ್ಬೇಕು ಅಂತ ಇದ್ದಾರೆ; ಇಡಿ ಅಸ್ತ್ರ ಬಳಸುತ್ತಿದ್ದಾರೆ – ಖರ್ಗೆ ವಾಗ್ದಾಳಿ

ರಾಜೀವ್ ಗಾಂಧಿ ಸತ್ತ ಬಳಿಕ ಗಾಂಧಿ ಕುಟುಂಬದಲ್ಲಿ ಒಬ್ಬರಾದ್ರು ಸಿಎಂ, ಡಿಸಿಎಂ, ಏನಾದ್ರೂ ಆಗಿದ್ದಾರಾ..?ಆದ್ರೂ ಗಾಂಧಿ ಗಾಂಧಿ ಪ್ಯಾಮಿಲಿ ಗಾಂಧಿ ಪ್ಯಾಮಿಲಿ ಅಂತೀರಿ. ಮೋದಿ ಕನಸಿನಲ್ಲೂ ರಾಹುಲ್ ಬರ್ತಾ ಇದ್ದಾರೆ. 2004 ರಲ್ಲಿ ಸೋನಿಯಾ ಗಾಂಧಿ ಪಿಎಂ ಆಫರ್ ಬಂದ್ರೂ ಪಿಎಂ ಆಗಿಲ್ಲಾ. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರನ್ನ ಪ್ರಧಾನಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಬೀದರ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಮೋದಿ ಒಬ್ಬನೆ ಬಾದ್‌ಶಾ ಆಗೋನಾ ಅಂತಿದಾನೆ. ಇಡಿಯನ್ನ ಹತಿಯಾರ್ ಮಾಡಿಕೊಂಡಿದ್ದಾರೆ. ವಿಪಕ್ಷಗಳ ಮೇಲೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಮೋದಿ, ಅಮಿತ್ ಶಾ ಅವರ ಅಂಜಿಕೆಯಿಂದಲೇ ಬಿಜೆಪಿ ಸೇರ್ತಾ ಇದ್ದಾರೆ. ಆದ್ರೆ ಬಿಜೆಪಿ ಸೇರಿದ ಬಳಿಕ ಎಲ್ಲರೂ ಸ್ವಚ್ಚವಾಗಿ ಬಿಡ್ತಾರೆ.
ಎಲ್ಲರನ್ನೂ ಬಿಜೆಪಿ ಸೇರ್ಸ್ಕೊಂಡು, ಭ್ರಷ್ಟಾಚಾರಿಗಳನ್ನ ಬಿಡಲ್ಲಾ ಅಂತಾರೆ ಎಂದರು.

ಎಲ್ಲರೂ ಬಿಜೆಪಿಯಲ್ಲೇ ಇದ್ದ ಮೇಲೆ, ಹೊರಗಡೆ ಯಾರು ಸಿಗ್ತಾರೆ. ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ, ಕೈ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.

Latest Indian news

Popular Stories