BidarFeatured Story
ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಬೋಟ್‌ಗೆ ಬೆಂಕಿ ಇಟ್ಟ ಅಧಿಕಾರಿಗಳು

ಹಲಸಿ ತೂಗಾಂವ್‌ನ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಬೋಟ್‌ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬೆಂಕಿ ಹಾಕಿ ಶಾಕ್ ನೀಡಿದ್ದಾರೆ.
ಹಲವು ವರ್ಷಗಳಿಂದ ಮಾಂಜ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮುಂಚೆ ಎಚ್ಚರಿಕೆ ನೀಡಿದ್ದರೂ ಸಹ ದಂಧೆ ಮುಂದುವರಿದಿತ್ತು. ಈ ಅಕ್ರಮ ದಂಧೆಗೆ ಅಧಿಕಾರಿಗಳು ಇದೀಗ ಕಡಿವಾಣ ಹಾಕಿದ್ದಾರೆ. ಇದೀಗ, ಅಧಿಕಾರಿಗಳು ಮಾಂಜ್ರಾ ನದಿಯಲ್ಲಿ ಬಿಟ್ಟು ಹೋಗಿದ್ದ ಬೋಟ್‌ಗೆ ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂ. ಬೆಲೆಯ ಬೋಟ್ ಸಂಪೂರ್ಣವಾಗಿ ನಾಶವಾಗಿದೆ.
ಭಾಲ್ಕಿ ತಾಲೂಕಿನಲ್ಲಿ ಮರಳು ದಂಧೆಗೆ ವಿರೋಧ ವ್ಯಕ್ತಪಡಿಸಿ, ಗ್ರಾಮಸ್ಥರು ಮಾನವೀಯ ಮನವಿ ಸಲ್ಲಿಸಿದ್ದರು. ಇದರ ನಂತರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಧನರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಸ್ಥಳೀಯ ತಹಶೀಲ್ದಾರ್ ಹಾಗೂ ಭಾಲ್ಕಿ ಗ್ರಾಮೀಣ ಪೋಲೀಸರು ಸಹಕಾರ ನೀಡಿದ್ದಾರೆ.