Bidar

ಒಂದು ತಿಂಗಳ ಅರೆವೈದ್ಯಕೀಯ ತರಬೇತಿ ತಾತ್ಕಾಲಿಕ ಸೇವೆಗೆ ನಿಯೋಜನೆ: ಅರ್ಜಿ ಆಹ್ವಾನ

ಬೀದರ ಮೇ.24 (ಕರ್ನಾಟಕ ವಾರ್ತೆ): ಕೊರೊನಾ ನಿಯಂತ್ರಿಸಲು ಹೆಚ್ಚುವರಿ ಅರೆ ವೈದ್ಯಕೀಯ ಸಿಬ್ಬಂದಿ ಅಗತ್ಯವಿರುವ ಹಿನ್ನೆಲೆಯಲ್ಲಿ ಆಸಕ್ತರಿಗೆ ಒಂದು ತಿಂಗಳ ತರಬೇತಿ ನೀಡಿ, ಜಿಲ್ಲಾ ಆಸ್ಪತ್ರೆಗಳಲ್ಲಿ ಆನ್‌ಜಾಬ್ ತಾತ್ಕಾಲಿಕ ಸೇವೆಗೆ ನೇಮಿಸಿಕೊಳ್ಳಲು ಜಿಲ್ಲಾ ಕೌಶಲ್ಯಾಭಿವೃದ್ಧಿ ಮಿಷನ್ ಹಾಗೂ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.

ತುರ್ತು ವೈದ್ಯಕೀಯ ಸೇವೆಗಳ ಬೇಸಿಕ್,ಸಾಮಾನ್ಯ ಸೇವೆಗಳ ಸಹಾಯಕರು,ತುರ್ತು ವಿಭಾಗಲ್ಲಿ ಕೇರ್,ವೈದ್ಯಕೀಯ ಉಪಕರಣಗಳ ತಾಂತ್ರಿಕ ಸಹಾಯಕರು,ಫ್ಲೆಬೋಟೋಮಿಸ್ಟ್, ವೈದ್ಯಕೀಯ ದಾಖಲೆಗಳ ನಿರ್ವಹಣೆ ಕುರಿತ ತರಬೇತಿ ನೀಡಿ , ತಾತ್ಕಾಲಿಕ ಉದ್ಯೋಗ ಒದಗಿಸಲಾಗುವುದು.
ಆಸಕ್ತರು ಜಿಲ್ಲಾ ತರಬೇತಿ ಸಂಸ್ಥೆ ಕಟ್ಟಡ ನೌಬಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ದೂ.ಸಂಖ್ಯೆ 08482-232699 ಅಥವಾ [email protected] ಇಮೇಲ್ ವಿಳಾಸಕ್ಕೆ ವಿವರ ಕಳುಹಿಸಿ ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button