ಮದುವೆ ಸಮಾರಂಭದಲ್ಲಿ ಕೊರೋನಾ ಕುರಿತು ಭಿತ್ತಿ ಪತ್ರಗಳು ಕೈಯಲ್ಲಿ ಹಿಡಿದು ವಿನೂತನ ಜನ ಜಾಗೃತಿ ಪ್ರತಿಯೊಬ್ಬ ನಾಗರಿಕರು ಕೋವಿಡ್ ಲಸಿಕೆ ಪಡೆಯಿರಿ – ಸುನೀಲ ಭಾವಿಕಟ್ಟಿ

ಬೀದರ್, ಮೇ ೩೧: ಬೀದರ ತಾಲೂಕಿನ ಶೇಕಾಪೂರ್ (ಯರನಳ್ಳಿ) ಗ್ರಾಮದಲ್ಲಿ ಇತ್ತಿಚೆಗೆ ವಾಲಿಕಾರ್ ಪರಿವಾರದಿಂದ ನಡೆದ ಅಂಬಿಕಾ ಜೋತೆ ಸಿದ್ರಾಮ್ ಅವರ ಸರಳ ಮದುವೆ ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್ ಬೀದರ ವತಿಯಿಂದ ಕೋವಿಡ್ ವ್ಯಾಕ್ಸಿನ್ ಲಸಿಕೆ ಪಡೆಯುವ ಕುರಿತು ಭಿತ್ತಿ ಪತ್ರಗಳನ್ನು ಕೈಯಲ್ಲಿ ಹಿಡಿದು ವಿನೂತನ ರೀತಿಯಲ್ಲಿ ಜನ ಜಾಗೃತಿ ಮೂಡಿಸಲಾಯಿತು.

ಕೊರೋನಾ ಸಾಂಕ್ರಾಮಿಕ ರೋಗವನ್ನು ನಿರ್ಲಕ್ಷ ಮಾಡಬೇಡಿ. ಕೊರೋನಾ ಲಸಿಕೆ ಪಡೆಯೋಣ, ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸೋಣ. ಸಾಮಾಜಿಕ ಅಂತರ ತಪ್ಪದೆ ಪಾಲಿಸಿ. ನೀವೂ ಸುರಕ್ಷಿತವಾಗಿರಿ ಇತರರೂ ಸುರಕ್ಷಿತವಾಗಿರಲು ಜಾಗೃತಿ ಮೂಡಿಸಿ. ಮನೆಯಲ್ಲೆ ಇರಿ, ಸುರಕ್ಷಿತವಾಗಿರಿ ಎಂಬ ಭಿತ್ತಿ ಪತ್ರಗಳನ್ನು ಕೈಯಲ್ಲಿ ಹಿಡಿದು ಜನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷರಾದ ಸುನೀಲ ಭಾವಿಕಟ್ಟಿಯವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರು ವೈದ್ಯರ ಸಲಹೆಯಂತೆ ಕೋವಿಡ್ ವ್ಯಾಕ್ಸಿನ್ ಲಸಿಕೆ (ಅoಡಿoಟಿಚಿ ಗಿಚಿಛಿಛಿiಟಿe) ಪಡೆಯಬೇಕು. ಲಸಿಕೆ ಪಡೆದುಕೊಂಡ ನಂತರವೂ ಸುರಕ್ಷತಾ ನಿಯಮಗಳ ಪಾಲನೆ ಮಾಡಬೇಕು. ಯಾವಾಗಲು ಮಾಸ್ಕ್ ಸರಿಯಾಗಿ ಧರಿಸಿ, ಇತರರಿಂದ ಅಂತರವನ್ನು ಕಾಪಾಡಿಕೊಳ್ಳಿ, ಕೈಗಳನ್ನು ಸೋಪು ನೀರಿನಿಂದ ಸ್ವಚ್ಚವಾಗಿ ತೊಳೆಯಬೇಕು ಇದು ನಿಮ್ಮ ಕುಟುಂಬ ಹಾಗೂ ಸಮಾಜದ ಸುರಕ್ಷತೆಗೆ ಅನಿವಾರ್ಯ ಎಂದರು.

ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಸಂಚಾಲಕರಾದ ವಿಜಯಕುಮಾರ ಸೊನಾರೆಯವರು ವಧು-ವರನಿಗೆ ಉಡುಗೋರೆಯಾಗಿ ಎನ್ ೯೫ ಮಾಸ್ಕ್ ನೀಡಿ ಮಾತನಾಡಿ, ಕೋವಿಡ್ ಲಸಿಕೆ ಪಡೆದುಕೊಂಡಲ್ಲಿ ನಾವು ಕೊರೋನಾದಿಂದ ಆಗುವ ಅಪಾಯದಿಂದ ದೂರ ಇರಬಹುದು ಎಂಬುವುದನ್ನು ನಾವು ಪ್ರತಿಯೊಬ್ಬರಿಗೂ ತಿಳಿಸಿ, ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷರಾದ ಎಂ.ಪಿ.ಮುದಾಳೆ, ಅಂಬಿಗರ ಚೌಡಯ್ಯ ಯುವ ಸೇನೆಯ ಬೀದರ ತಾಲೂಕಾಧ್ಯಕ್ಷ ಸಂಜುಕುಮಾರ ಸಿರ್ಸೇ, ದಕ್ಷೀಣ ಕ್ಷೇತ್ರದ ಗೌರವ ಅಧ್ಯಕ್ಷರಾದ ಶನ್ಮೂಖಪ್ಪಾ ಶೇಕಾಪೂರ್, ಭೀಮಾಶಂಕರ ಜಮಾದಾರ್, ಕಲ್ಯಾಣ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷ ನಾಗೇಶ ವಾಲಿಕಾರ್, ಮಹೇಶ ಪಾಟೀಲ್, ಇತರರು ಇದ್ದರು.

Latest Indian news

Popular Stories