ಉಡುಪಿ: ಮನನೊಂದು ಮಹಿಳೆ ಆತ್ಮಹತ್ಯೆ

ಉಡುಪಿ,ಮೇ.14; ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ, ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆಯು ಕೊರಂಗ್ರಪಾಡಿಯ ಸಾಯಿಬಾಬ ಮಂದಿರದ ಸನಿಹ ಮಂಗಳವಾರ ನಡೆದಿದೆ.

ಆತ್ಮಹತ್ಯೆಗೈದಿರುವ ಮಹಿಳೆ ಆತ್ಮಹತ್ಯೆಗೈಯುವುದಾಗಿ ಸನಿಹದ ಮನೆಯವರೆಗೆ ಪೋನ್ ಕರೆ ಮಾಡಿ ತಿಳಿಸಿದ್ದಳು. ನೆರೆಮನೆಯವರು ಬಂದು ನೋಡಿದಾಗ ಮಹಿಳೆ ಅದಾಗಲೇ ಮೃತಪಟ್ಟಿದ್ದಾಳೆ. ಮೃತ ಮಹಿಳೆ ಭಾರತಿ ಶೆಟ್ಟಿಗಾರ್ (53ವ) ನೇಕಾರಿಕೆ ಕೆಲಸ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ. ಮಹಿಳೆ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ 500 ರೂ ಬೈಲೂರು ಮಹಿಷಿಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ಹೂವಿನ ಪೂಜೆಗೆ ಮತ್ತು 200 ರೂಪಾಯಿ ದಿನ ಪತ್ರಿಕೆಯ ತಿಂಗಳ ಬಿಲ್ಲು ಪಾವತಿಸ ಬೇಕು, ಗಂಡನ ಪೋಷಣೆಗೆ ನನ್ನ ಚಿನ್ನ ಹಣ ಸಾಕು ಎಂದು ಬರೆಯಲಾಗಿದೆ.

ಘಟನಾ ಸ್ಥಳದಲ್ಲಿದ್ದು ಎ.ಎಸ್.ಐ ವಿಜಯ, ತನಿಖಾ ಸಹಾಯಕರಾಗಿರುವ ನೇತ್ರ, ಶಿವಕುಮಾರ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಅಜ್ಜರಕಾಡಿನ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಉಚಿತ ಅಂಬುಲೇನ್ಸ್ ಸೇವೆ ನೀಡಿ ಇಲಾಖೆಗೆ ನೆರವಾದರು.

Latest Indian news

Popular Stories