ಬೀದರ್ : ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ಎಸ್.ಕೆ ಬೆಳ್ಳುಬ್ಬಿ ವಿವಾದಾತ್ಮಕ ಹೇಳಿಕೆ.

ಕಾಂಗ್ರೆಸ್ ನಲ್ಲಿರುವವರು ನಪುಸಂಕರು, ಶೆಂಡರು ಎಂದು ಬಹಿರಂಗ ವೇದಿಕೆಯಲ್ಲೆ ಬಿಜೆಪಿ ಮುಖಂಡ ಎಸ್.ಕೆ ಬೆಳ್ಳುಬ್ಬಿ ವಾಗ್ದಾಳಿ ನಡೆಸಿದರು.

ರಾಮಾಯಣದ ರಾಮ ವನವಾಸಕ್ಕೆ ಹೊಗಿ ವಾಪಸ್ಸಾಗಿ ಬರುವ ಸಂಧರ್ಬದ ಕಥೆಯನ್ನು ಹೇಳುತ್ತ ಕಾಂಗ್ರೆಸ್ ಪಕ್ಷಕ್ಕೆ ತುಲನೆ ಮಾಡಿದರು.

ಬೀದರ್ ನಗರದ ಗಣೇಶ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರ ನಾಮಪತ್ರ ಸಲ್ಲಿಕೆ ನಿಮಿತ್ತ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ ವಿವಾದ ಎಬ್ಬಿಸಿದ್ದಾರೆ.ವೇದಿಕೆಯಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಉಪಸ್ಥೀತರಿದ್ದರು.

ಜೈ ಶ್ರೀ ರಾಮ ಘೋಷಣೆಯೊಂದಿಗೆ ಭಗವಂತ ಖೂಬಾ ಭಾಷಣ:

ಕಾಂಗ್ರೆಸ್ ನವರಿಗೆ 75 ವರ್ಷಗಳ ನಂತರ ಬುದ್ಧಿ ಬಂದಿದೆ. ಇವಾಗ ಅವರಿಗೆ ಲೋಕಸಭಾ ಚುನಾವಣೆ ಮಹತ್ವ ಅನ್ನಿಸುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಭಗವಂತ್ ಖುಬಾ ಹೇಳಿದೆಯ.

ಮೊದಲು ಹಣ, ಹೆಂಡ,ಜನರನ್ನು ಭಯಭೀತ ಗೊಳಿಸಿ ಅಧಿಕಾರಿ ಪಡೆಯುತ್ತಿದ್ದರು. ಇದ್ರೆ ಮೋದಿ ಅವರ ಕಾರ್ಯ ವೈಖರಿ ನೋಡಿ ಇವರಿಗೆ ಇವಾಗ ಮಹತ್ವ ಅನ್ನಿಸುತ್ತಿದೆ. ಬಿಜೆಪಿ ಪಕ್ಷ ದೇಶದ ಜನರ ಏಳಿಗೆಗಾಗಿ,ಅಸ್ಮಿತೆಗಾಗಿ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ವಿರುದ್ಧ ಭಗವಂತ ಖೂಬಾ ವಾಗ್ದಾಳಿ ನಡೆಸಿ, ದೇಶದಲ್ಲಿ ಕಾಂಗ್ರೆಸ್ ಪಕ್ಷದ ದಿವಾಳಿ ಶುರುವಾಗಿದೆ. ಚುನಾವಣೆ ಪೂರ್ವದಲ್ಲಿ ಸೀರೆ,ಹಣ, ಕ್ಯಾಲೆಂಡರ್ ಹಂಚುವುದು ಖಂಡ್ರೆ ಎಂದು ಖೂಬಾ ಆರೋಪಿಸಿದರು.

ನನ್ನ ಬಗ್ಗೆ ಮಾತಾಡುವ ನೀವು ೫೦ ವರ್ಷದಲ್ಲಿ ಬೀದರ್ ಜಿಲ್ಲೆಗೆ ಖಂಡ್ರೆ ಕೊಡುಗೆ ಏನು,..? ನಿಮಗೆ ಕಿವಿ, ಇಲ್ಲ, ಒಳ್ಳೆಯ ಮನಸ್ಸಿಲ್ಲದ ವ್ಯಕ್ತಿ ಈಶ್ವರ್ ಖಂಡ್ರೆ. ಸಾಗರ್ ಖಂಡ್ರೆ ನೀವು ರಾಜಕೀಯದಲ್ಲಿ ಇನ್ನು ಕಣ್ಣು ತೆರೆದಿಲ್ಲ. ನಮಗೆ ಸವಾಲ್ ಹಾಕುವ ನೀವು, ನಿಮ್ಮ ತಂದೆಯ ವಿರುದ್ಧ ಎಷ್ಟು ಆರೋಪಗಳಿವೆ ಕೇಳಿ ಎಂದರು.

ನೀವು ಹುಟ್ಟು ಮೊದಲೆ ಕೊಲೆ, ಭ್ರಷ್ಟಾಚಾರ ಅಂತಹ ಆರೋಪಗಳಿವೆ. ಇಂತಹ ಆರೋಪಗಳು ನಿಮ್ಮ ಮೇಲೆ ಇದ್ದ ಮೇಲೆ ಸಮಾಜಕ್ಕೆ ಏನು ಕೊಡುಗೆ ಕೊಡುತ್ತೀರಾ,..? ಭೀಮಣ್ಣ ಖಂಡ್ರೆ ಸಾರಿಗೆ ಸಚಿವರಾಗಿದ್ದ ಅವದಿಯ ನಕಲಿ ಟಿಕೆಟ್ ಹಗರಣ ಪ್ರಸ್ತಾಪಿಸಿ, ಹಲವರು ನಿಮ್ಮ ಮನೆಯ ಅಂಗಳದಲ್ಲಿ ಜೀವ ಬಿಟ್ಟಿದ್ದಾರೆ ಎಂದರು.

ಬೀದರ್ ಜಿಲ್ಲೆ ಹಿಂದುಳಿಯಲು ಈಶ್ವರ್ ಖಂಡ್ರೆ ಕಾರಣ. MGSSK ಫ್ಯಾಕ್ಟರಿಯಲ್ಲಿ ರೈತರ ಹಣ ಯಾರ ಪೋಲಾಗಿದೆ. ಬೀದರ್ ನಲ್ಲಿ ಕರಿ ಕಾಂಪೌಂಡ್ ಬೆಳೆಯಿತು,MGSSK ಸಾಲನ್ನು ಬೆಳೆಯಿತು. ಡಿಸಿಸಿ ಬ್ಯಾಂಕ್ ಇತಿಹಾಸದಲ್ಲಿ ಎಂದು ಕೂಡ IT ದಾಳಿ ಯಾಗಿಲ್ಲ. ಉಪ್ಪು ತಿಂದವರಿಗೆ ನೀರು ಕುಡಿಯಬೇಕು. ಡಿಸಿಸಿ ಬ್ಯಾಂಕ್ ನಲ್ಲಿ ಐಟಿ ರೇಡ್ ನಾನು ಮಾಡಿಸಿದ್ದೆನೆಂದು ಹೇಳಿದರು. ಐಟಿ ಅಧಿಕಾರಿಗಳು ಅವರದ್ದೆ ಆದ ಮಾಹಿತಿ ಮೆರೆಗೆ ರೇಡ್ ಮಾಡಿದ್ದಾರೆ ಎಂದರು.

Latest Indian news

Popular Stories