ಚಿಕ್ಕಬಳ್ಳಾಪುರ :ರೈಲಿಗೆ ಸಿಲುಕಿ 92 ಕುರಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ.ರೈಲ್ವೆ ಹಳಿಗಳ ಪಕ್ಕದಲ್ಲೇ ಮೂವರು ಮಹಿಳೆಯರು ಕುರಿಗಳನ್ನು ಮೇಯಿಸುತ್ತಿದ್ದರು.
ಈ ವೇಳೆ ನಾಯಿಯೊಂದು ಕುರಿಗಳನ್ನು ಅಟ್ಟಾಡಿಸಿದೆ. ಬೆದರಿದ ಕುರಿಗಳು ರೈಲ್ವೇ ಹಳಿಗಳ ಮೇಲೆ ದಿಕ್ಕಾಪಾಲಾಗಿ ಓಡಿದೆ. ಇದೇ ವೇಳೆ ರೈಲೊಂದು ಬಂದಿದ್ದು, ರೈಲಿಗೆ ಸಿಲುಕಿ 92 ಕುರಿಗಳು ದಾರುಣವಾಗಿ ಸಾವನ್ನಪ್ಪಿದೆ. ಘಟನೆಯಲ್ಲಿ ಮಹಿಳೆ ಕೂದಲಮ್ಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೈಲ್ವೇ ಹಳಿಗಳ ಮೇಲೆ ಕುರಿಗಳು ದಾರುಣವಾಗಿ ಸತ್ತು ಬಿದ್ದಿದೆ.