ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹4.21ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಚಿಕ್ಕಮಗಳೂರು (ಮಾ.26) : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ ಸಿ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 4.21 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಬಿವಿಸಿ ಸಾರಿಗೆ ಸಂಸ್ಥೆಯ ಮಹೇಂದ್ರ ವಾಹನವನ್ನು ಎಂ.ಸಿ.ಹಳ್ಳಿ ಚೆಕ್‌ಪೊಸ್ಟ್ ಬಳಿ ತಡೆದು ಶೋಧಿಸಿದಾಗ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿವೆ.

ನಾಲ್ಕು ಕೋಟಿ ರೂ ಬೆಳೆಯ 6 ಕೆ.ಜಿ 586 ಗ್ರಾಂ ತೂಕದ ಚಿನ್ನದ ಆಭರಣ, 2,47 ಲಕ್ಷ ರೂ ಬೆಲೆ ಬಾಳುವ ಒಂದು ಕೆ.ಜಿ 873 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ದೊರಕಿವೆ.17.47ಲಕ್ಷ ರೂಪಾಯಿ ಬೆಲೆಯ ಒಂದು ಕೆ.ಜಿ 77 ಗ್ರಾಂ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಸಂಬಂಧ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವ್ಯವಸ್ಥಾಪಕ ಗೋಪಾಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

Latest Indian news

Popular Stories