ಮುದೂರು: ಕುಸಿದ ಕಿರು ಸೇತುವೆ, ಅಪಾಯದಂಚಿನಲ್ಲಿ ಬೆಳ್ಕಲ್ ಶಾಲೆ

ಶೇಡಿಗುಂಡಿ, ವಾಟೆಗುಂಡಿಯ ಜನತೆಯ ಸಂಪರ್ಕ ಕೊಂಡಿಯಾಗಿರುವ ಬೆಳ್ಕಲ್ ಶಾಲೆಯ ಮುಂಬಾಗದ ಕಿರು ಸೇತುವೆಯು ಮಳೆಗಾಲದ ನೀರಿನ ರಭಸಕ್ಕೆ ಕುಸಿದುಹೋಗಿದೆ

ಕಳೆದ ಎರಡು ಮೂರು ದಿನಗಳಿಂದ ವಿಪರೀತವಾಗಿ ಮಳೆ ಬಂದಿರುವುದರಿಂದ ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದು ಬಂದ ನೀರಿನ ರಭಸಕ್ಕೆ ಸೇತುವೆಯ ಪಿಲ್ಲಗಳ ಅಡಿಪಾಯ ಕೊಚ್ಚಿ ಹೋಗಿ ಪಿಲ್ಲರ್ ಗಳು ವಾಲಿಕೊಂಡಿದ್ದು ಸೇತುವೆಯ ಮೇಲ್ಬಾಗದಲ್ಲಿ ಅನೇಕ ಕಡೆ ಬಿರುಕು ಬಿಟ್ಟಿದ್ದು ಕುಸಿದು ಬೀಳುವ ಹಂತದಲ್ಲಿದೆ ಬೆಳ್ಕಲ್ ಶಾಲೆಗೆ, ಅಂಗನವಾಡಿಗೆ ಹೋಗುವ ಮಕ್ಕಳಿಗೆ ದಿನನಿತ್ಯ ಒಡಾಡುವ ಸ್ಥಳೀಯ ಜನರಿಗೆ ಹಾಗು ಶಾಲಾ ಮಕ್ಕಳಿಗೆ ತೊಂದರೆ ಉಂಟಾಗಿದೆ ದಶಕಗಳ ಹಿಂದೆ ಶೇಡಿಗುಂಡಿಯ ಬಾಗದ ಜನರಿಗೆ ಸಂಪರ್ಕ ಬೆಸೆಯುವ ಏಕೈಕ ಮಾರ್ಗ ಇದಾಗಿತ್ತು ಅಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ನಿರ್ಮಾಣಗೊಂಡ ಈ ಸೇತುವೆ ಈ ಬಾಗದ ಜನರ ಸಂಪರ್ಕ ಕೊಂಡಿಯಾಗಿತ್ತು
ಶಾಲೆಯ ಮುಂಬಾಗದಲ್ಲಿಯೇ ಹೊಳೆ ಹರಿದು ಹೋಗುವುದರಿಂದ ಹೊಳೆಯ ಬದಿಯು ಬಿರುಕು ಬಿಟ್ಟಿದ್ದು ಮುಂದೆ ಶಾಲೆಗೂ ಕೂಡ ಅಪಾಯ ಎದುರಾಗುವ ಸಾದ್ಯತೆಯು ಹೆಚ್ಚಾಗಿರುವುದು ಕಂಡುಬರುತ್ತಿದೆ ಜಡ್ಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸತೀಶ್ ತೋಳಾರ್ ಗ್ರಾಮ ಪಂಚಾಯತ್ ಸದಸ್ಯರು ಶ್ರೀನಿವಾಸ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಹೊಳೆ ಬದಿಯ ಐವತ್ತು ಮೀಟರ್ ಅಂತರದಲ್ಲೇ ಶಾಲೆ ಇರುವುದರಿಂದ ಅಪಾಯಕ್ಕೆ ಮುನ್ಸೂಚನೆ ಯಂತಿರುವ ಸೇತುವೆಯ ಕುಸಿತದಿಂದ ಶಾಲಾ ಮಕ್ಕಳ ಪೋಷಕರಲ್ಲಿ ಭಯದ ವಾತಾವರಣ ಉಂಟಾಗಿದ್ದು ಅತೀ ಶೀಘ್ರವಾಗಿ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಉಡುಪಿ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರು ಹಾಗು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರು ವಾಸುದೇವ ಮುದೂರು ರವರು ಜಿಲ್ಲಾಡಳಿತಕ್ಕೆ ಆಗ್ರಹಿಸಿರುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿದಿರುತ್ತಾರೆ

Latest Indian news

Popular Stories