ಉಡುಪಿ: ಅಪಾಯ ಆಹ್ವಾನಿಸುತ್ತಿದೆ ಆವರಣ ಗೋಡೆ..!

ಉಡುಪಿ: ನಗರದ ಕವಿ ಮುದ್ದಣ ಮಾರ್ಗ, ನಗರಸಭೆಯ ಎದುರು ಭಾಗದಿಂದ ಹಾದು ಹೋಗುವ ಚಿತ್ತರಂಜನ್ ಸರ್ಕಲ್ ರಸ್ತೆಯ ಸನಿಹ, ಈ ಮೊದಲಿದ್ದ ಹಾಜಿ ಆಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ, ನಿವೇಶನದ ಆವರಣ ಗೋಡೆಯು ಸಂಪೂರ್ಣ ಶಿಥಿಲಗೊಂಡಿದೆ.   

ಬಿರುಕು ಬಿಟ್ಟ ಗೋಡೆಯು ಉದ್ದಕ್ಕೂ ರಸ್ತೆಯ ಬದಿಗೆ ವಾಲಿಕೊಂಡಿದ್ದು, ಗೋಡೆಯು ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಾದರೂ ಜನರ ಓಡಾಟ, ವಾಹನಗಳ ಸಂಚಾರವಿರುವ ರಸ್ತೆಗೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಆವರಣ ಗೋಡೆಯ ಸನಿಹವೇ ವಾಹನ ನಿಲುಗಡೆ ಇದ್ದು, ಪಾದಚಾರಿಗಳ ಸಂಚಾರವಿದೆ, ಈಗಾಗಲೇ ಸುರಿದ ಮಳೆಗೆ ನಗರದಲ್ಲಿ ಆವರಣಗೋಡೆಗಳು ಉರುಳಿಬಿದ್ದು ವಾಹನಗಳು ಹಾನಿಗೊಳಗಾದ ಘಟನೆಗಳು ನಡೆದಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು ಉದ್ಭವಿಸಿರುವ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತವಾದ ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Latest Indian news

Popular Stories