Climate and environmentUttara Kannada

ಉತ್ತರ ಕನ್ನಡದಲ್ಲಿ ಅತೀ ಹೆಚ್ಚು ಮಳೆ

ಕಾರವಾರ: ರೆಡ್ ಅಲರ್ಟ ಘೋಷಿಸಲಾಗಿದ್ದ ಉತ್ತರ ಕನ್ನಡದಲ್ಲಿ ಮಂಗಳವಾರ ಬೆಳಗಿನವರೆಗೆ ಕುಮಟಾ, ಹೊನ್ನಾವರ, ‌ಕಾರವಾರ, ಶಿರಸಿ, ಸಿದ್ದಾಪುರದಲ್ಲಿ ಅತೀಯಾದ ಮಳೆ ಸರಿಯಿತು. ಕಾರವಾರದ‌ ಕಿನ್ನರ, ಅಂಕೋಲಾದ ಶಿರೂರಲ್ಲಿ ಜೀವಹಾನಿ ಮಾಡಿತು. ಕುಮಟಾ, ಹೊನ್ನಾವರದ ಕೆಲ ಗ್ರಾಮಗಳಲ್ಲಿ ,ಕಾರವಾರದ ಚೆಂಡಿಯಾ, ಅರ್ಗಾದಲ್ಲಿ, ಮಾಜಾಳಿ, ಕಡವಾಡ, ಅಸ್ನೋಟಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿತು.


ಎಲ್ಲೆಲ್ಲಿ ಎಷ್ಟು ಮಳೆ :
ಕಳೆದ 24 ತಾಸುಗಳಲ್ಲಿ ಕುಮಟಾದಲ್ಲಿ ಅತೀ ಹೆಚ್ಚು ಮಳೆ ಮಂಗಳವಾರ ಬೆಳಗಿನ ಜಾವ 8 ರ ಸಮಯಕ್ಕೆ ಬಿದ್ದಿದೆ. 170.5 ಮಿಲಿ ಮೀಟರ್ ಕುಮಟಾ ದಲ್ಲಿ, ಹೊನ್ನಾವರದಲ್ಲಿ 164.7 ಕಾರವಾರದಲ್ಲಿ 159.4ಮಿಲಿ ಮೀಟರ್ ಮಳೆ ಸುರಿದಿತ್ತು , ಶಿರಸಿಯಲ್ಲಿ 121 , ಅಂಕೋಲಾ 179 ಮಿಲಿ ಮೀಟರ್ ಮಳೆ ಸುರಿದಿದೆ. ಭಟ್ಕಳದಲ್ಲಿ ,ಹಳಿಯಾಳದಲ್ಲಿ 12. 3 ಸುಫಾದಲ್ಲಿ 49.8 ಯಲ್ಲಾಪುರದಲ್ಲಿ 49.4 ದಾಂಡೇಲಿಯಲ್ಲಿ 17.1 ಮಿಲಿ ಮೀಟರ್, ಸಿದ್ದಾಪುರದಲ್ಲಿ 154.3 ಮಿಲಿ ಮೀಟರ್ ಮಳೆ ಸುರಿದಿದೆ. ಕಾಳಿ ನದಿಯ ಕದ್ರಾ ತುಂಬಿ ಹರಿಯುತ್ತಿದೆ. ಸುಫಾ ಅಣೆಕಟ್ಟಿಗೆ 28566.73, ಕದ್ರಾ ಅಣೆಕಟ್ಟಿಗೆ 38716 ಕ್ಯೂಸೆಕ್ಸ ನೀರು ಒಳಗೆ ಹರಿದು ಬರುತ್ತಿದೆ. ಕದ್ರಾ ದಿಂದ 28522 ಕ್ಯೂಸೆಕ್ಸ , ಕೊಡಸಳ್ಳಿಯಿಂದ 18756 ಕ್ಯೂಸೆಕ್ಸ ಹೊರಗೆ ಬಿಡಲಾಗುತ್ತಿದೆ.
ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
……

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button