ಮುಂಡಗೋಡ, ಹಳಿಯಾಳ , ಹೊನ್ನಾವರದಲ್ಲಿ ಮಳೆ

ಕಾರವಾರ : ನಿರಂತರ ಬಿಸಲಿನ ತಾಪಕ್ಕೆ ಕಂಗೆಟಿದ್ದ ಉತ್ತರ ಕನ್ನಡ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮುಂಡಗೋಡ, ಹಳಿಯಾಳ, ಸಿದ್ದಾಪುರ, ಹೊನ್ನಾವರದಲ್ಲಿ ಸಹ ಸಾಧಾರಣ ಮಳೆ ಸುರಿಯಿತು.
ಅತೀ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಸತಾಯಿಸಿ ಸುರಿದ ಮಳೆ ಸಮಾಧಾನ ತಂದಿದೆ.
ಶುಕ್ರವಾರ ಮಧ್ಯಾಹ್ನ ಹಳಿಯಾಳ ,ಮುಂಡಗೋಡದಲ್ಲಿ ದಿಢೀರನೇ ಜೋರು ಗಾಳಿ ಸಹಿತ ವ್ಯಾಪಕ ಮಳೆ ಸುರಿಯಿತು.ದಾಂಡೇಲಿಯಲ್ಲಿ ಒಂದರೆಡು ನಿಮಿಷ ಮಳೆ ಹನಿ ಬಿದ್ದವು. ಕುಮಟಾ, ಕಾರವಾರ, ಅಂಕೋಲಾದಲ್ಲಿ ಮೋಡ ಕವಿದ ವಾತಾವರಣ ಇತ್ತು.

ಹಳಿಯಾಳ ಪಟ್ಟಣದ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ಸುರಿದ ಮಳೆಗೆ ಜತಗಾ, ಗೌಳಿವಾಡದಲ್ಲಿ ಮರಗಳು ಉರುಳಿಬಿದ್ದಿದ್ದು, ಮಾವಿನ ಬೆಳೆಗೂ ಹಾನಿಯಾಗಿದೆ.

ಜೋರು ಗಾಳಿ ಸಮೇತ ಬಿದ್ದ ಮಳೆಯಿಂದಾಗಿ ತಾಲೂಕಿನ ಜತಗಾ ಗ್ರಾಮ, ಗೌಳಿವಾಡದಲ್ಲಿ ಭಾರಿ ಮರವೊಂದ ವಿದ್ಯುತ್ ಕಂಬ ಮೇಲೆ ಬಿದ್ದು , ವಿದ್ಯುತ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು

ಬಿರುಗಾಳಿಯಿಂದಾಗಿ ಸಾಕಷ್ಟು ಕಡೆ ಮಾವಿನ ಕಾಯಿ ನೆಲಕ್ಕೆ ಉದುರಿದ್ದು, ರೈತರಿಗೆ ನಷ್ಟವಾಗಿದೆ.

Latest Indian news

Popular Stories