
Covid-19
ಕಾರ್ಮಿಕರಿಗೆ ಕೋವಿಡ್ ಅರಿವು ಕಾರ್ಯಕ್ರಮ
ಮಡಿಕೇರಿ ಏ.೨೭ : ಮಡಿಕೇರಿಯಲ್ಲಿಯ ವಿವಿಧ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದ ಸ್ಥಳಗಳಿಗೆ ಭೇಟಿ ನೀಡಿ ಕೋವಿಡ್-೧೯ರ ೨ನೇ ಅಲೆಯ ಕುರಿತು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿ ಕೆಲಸ ಮಾಡಿಸಲು ಮತ್ತು ಮಾಡುವಂತೆ ಗುತ್ತಿಗೆದಾರರಿಗೆ, ಗುತ್ತಿಗೆ ಕಾರ್ಮಿಕರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಮಡಿಕೇರಿ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎA.ಯತ್ನಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

ವಲಸೆ ಕಾರ್ಮಿಕರ ಮಾಹಿತಿಯನ್ನು ನಮೂನೆ-ಬಿ ಯಲ್ಲಿ ತಯಾರಿಸಿ ಸಲ್ಲಿಸಲು ತಿಳಿಸಲಾಯಿತು ಹಾಗೂ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಂಡು ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಹೊರಡಿಸುವ ಕೋವಿಡ್-೧೯ಕ್ಕೆ ಸಂಬAಧಿಸಿದ ಆದೇಶ,ಸುತ್ತೋಲೆ ಮತ್ತು ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಯಿತು. ಫೋಟೋ :: ಕಾರ್ಮಿಕ





