ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧತೆ

ಬೆಂಗಳೂರು : ಕೊರೋನಾ ೨ನೇ ಅಲೆಯ ಅಬ್ಬರ ಕಡಿಮೆಯಾಗಿ, ೩ನೇ ಅಲೆಯು ಜುಲೈ ಅಂತ್ಯದ ವೇಳೆಗೆ ಆರಂಭವಾಗಲಿದೆ ಎಂದು ತಜ್ಞರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೋವಿಡ್-೧೯ನ ಸಂಭಾವ್ಯ ಮೂರನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಭಾವ್ಯ ೩ನೇ ಅಲೆಯನ್ನು ಸಮರ್ವಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ತಜ್ಞರು ನೀಡಿರುವ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.
೩ನೇ ಅಲೆಯ ಸಂದರ್ಭದಲ್ಲಿ ಗರ್ಭಿಣಿಯರು, ಮಕ್ಕಳು ಸೋಂಕಿಗೆ ಹೆಚ್ಚಾಗಿ ಒಳಗಾಗುವ ಸಂಭವವಿರುವುದರಿAದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸನ್ನದ್ಧವಾಗಿರುವುದು ಅಗತ್ಯವಾಗಿದೆ ಎಂದಿದ್ದಾರೆ.
ಮಾರ್ಗಸೂಚಿ ಕ್ರಮಗಳು:
ಕೋವಿಡ್-೧೯ ಹರಡುವಿಕೆಯನ್ನು ತಡೆಗಟ್ಟುವ ಅಗತ್ಯ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರವನ್ನು ಕಾಪಾಡುವುದು ಹಾಗೂ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಅಗತ್ಯ ಅoviಜ ಂಠಿಠಿಡಿoಠಿಡಿiಚಿಣe ಃehಚಿvioಡಿ (ಅಂಃ) ಅನ್ನು ಕಡ್ಡಾಯವಾಗಿ ಜಾರಿಗೊಳಿಸಿವುದು.
ಈಗಾಗಲೇ ಚಾಲ್ತಿಯಲ್ಲಿರುವ ಖಿesಣiಟಿg, ಖಿಡಿಚಿಛಿಞiಟಿg, ಖಿಡಿಚಿಛಿiಟಿg, ಖಿಡಿiಚಿgiಟಿg, ಖಿಡಿeಚಿಣiಟಿg ಚಿಟಿಜ Use oಜಿ ಖಿeಛಿhಟಿoಟogಥಿ ಮಾನದಂಡವನ್ನು ಕಟ್ಟುನಿಟ್ಟಾಗಿ ಮುಂದುವರೆಸುವುದು.
ಕೋವಿಡ್-೧೯ ಪರೀಕ್ಷೆಗೆ ಪ್ರತಿ ಜಿಲ್ಲೆಗೆ ನಿಗದಿಪಡಿಸಲಾಗುವ ದೈನಂದಿನ ಗುರಿ ಸಾಧನೆಯನ್ನು ಖಚಿತಪಡಿಸಿಕೊಳ್ಳಬೇಕು. ಸೋಂಕಿನ ಲಕ್ಷಣಗಳನ್ನು ಹೊಂದಿದವರು, ಐಎಲ್‌ಐ ಮತ್ತು ಸಾರಿ ಯಿಂದ ಬಳಲುತ್ತಿರುವವರು, ಹೈ-ರಿಸ್ಕ್ ಗುಂಪಿನವರನ್ನು ಆದ್ಯತೆಯ ಮೇರೆಗೆ ಪರೀಕ್ಷೆಗೆ ಒಳಪಡಿಸಬೇಕು.
ವರದಿಯಾಗುವ ಪ್ರತಿ ಖಚಿತ ಪ್ರಕರಣಕ್ಕೆ ಕನಿಷ್ಠ ಒಟ್ಟು ೨೦ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸುವುದು.
Phಥಿsiಛಿಚಿಟ ಖಿಡಿiಚಿgiಟಿg : ಕೋವಿಡ್-೧೯ ಪರೀಕ್ಷೆಯ ಪಾಸಿಟಿವ್ ವರದಿ ಬಂದ ೧೨ ಗಂಟೆಯೊಳಗೆ Phಥಿsiಛಿಚಿಟ ಖಿಡಿiಚಿgiಟಿg ನಡೆಸಿ, ಅದರಂತೆ ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಗಳಿಗೆ, ಆಸ್ಪತ್ರೆಗೆ ದಾಖಲಿಸುವುದು.
ಹೋಂ ಐಸೋಲೇಷನ್ ನಲ್ಲಿ ಆರೈಕೆ ಪಡೆಯುತ್ತಿರುವವರನ್ನು ನಿಗದಿತವಾಗಿ ಟೆಲಿಕನ್ಸಲ್‌ಟೇಷನ್ ನ ಮೂಲಕ ಸಂಪರ್ಕಿಸಿ, ಅಗತ್ಯ ಸಲಹೆಗಳನ್ನು ನೀಡಿ, ಮೇಲ್ವಿಚಾರಣೆ ನಡೆಸುವುದು.
೫ ಅಥವಾ ೫ಕ್ಕಿಂತ ಹೆಚ್ಚು ಖಚಿತ ಪ್ರಕರಣಗಳು ವರದಿಯಾದ ಪ್ರದೇಶವನ್ನು ಕಂಟೇನ್ಮೆAಟ್ ವಲಯವೆಂದು ಗುರುತಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
ಖಚಿತ ಪ್ರಕರಣವು ವರದಿಯಾದ ವಸತಿ ಸಮುಚ್ಛಯದ ಒಂದು ಮಹಡಿಯನ್ನು ( ಔಟಿe ಈಟooಡಿ ಅomಠಿಟeಣeಟಥಿ iಟಿ ಣhe ಂಠಿಚಿಡಿಣmeಟಿಣ ಅomಠಿಟex) ಅಥವಾ ಖಚಿತ ಪ್ರಕರಣವು ವರದಿಯಾದ ರಸ್ತೆಯನ್ನು ( Pಚಿಡಿಣiಛಿuಟಚಿಡಿ Sಣಡಿeeಣ) ಕಂಟೇನ್ಮೆAಟ್ ವಲಯವೆಂದು ಗುರುತಿಸಿವುದು.
ಕೋವಿಡ್-೧೯ ಸಂಬAಧ ಹೆಚ್ಚಿನ ಮಾಹಿತಿಗಾಗಿ ಶುಲ್ಕರಹಿತ ದೂರವಾಣಿ ಸಂಖ್ಯೆ ೧೯೧೨ ( ಬೆಂಗಳೂರಿಗೆ ಮಾತ್ರ) ಹಾಗೂ ೧೦೪ ( ರಾಜ್ಯದ ಇತರ ಜಿಲ್ಲೆಗಳು) ಗೆ ಕರೆ ಮಾಡುವಂತೆ ಸಾರ್ವಜನಿಕರಿಗೆ ತಿಳಿಸುವುದು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಮೇಲೆ ತಿಳಿಸಿದ ಎಲ್ಲಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Latest Indian news

Popular Stories

error: Content is protected !!