ಮೈಸೂರು ಜಿಲ್ಲಾ ಆಡಳಿತದ ವಿರುದ್ಧ ಶಾಸಕರ ಆಕ್ರೋಶ

ಮೈಸೂರು : ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಕೋವಿಡ್ ಸೋಂಕಿನ ಅಬ್ಬರ ಜಾಸ್ತಿಯಾಗ್ತಾ ಇದೆ. ಇದೇ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರ ಮೇಲೆ ಜೆಡಿಎಸ್ ಶಾಸಕ ಸಾರಾ ಮಹೇಶ್ ಕಿಡಿಕಾರಿದ್ದಾರೆ.
ಜಿಲ್ಲಾ ಮಂತ್ರಿಗಳೇ ಬದುಕಿದ್ದೀರ.. ಮೈಸೂರು ಜಿಲ್ಲಾಡಳಿತ ಇದೆಯೇ? ಏನ್ ಮಾಡ್ತಿದೆ. ಮೈಸೂರಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಇಲ್ಲದೆ ಜನ ಸಾಯ್ತಾ ಇದ್ದಾರೆ ಅಂತ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹರಿ ಹಾಯ್ದಿದ್ದಾರೆ.
ನನ್ನ ಕ್ಷೇತ್ರದ ಮಹಿಳೆಯೊಬ್ಬರು ಆಕ್ಸಿಜನ್, ಬೆಡ್ ಇಲ್ಲದೆ ಮೃತಪಟ್ಟಿದ್ದಾರೆ. ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಯ ಎರಡು ವೆಂಟಿಲೇಟರ್ ತರಿಸಿಕೊಟ್ರೂ ಅದನ್ನ ಫಿಕ್ಸ್ ಮಾಡಲಿಲ್ಲ. ನಾನು ರಾಜಕಾರಣ ಮಾಡುವುದಾಗಿದ್ರೆ ಆ ಮಹಿಳೆ ಶವವನ್ನು ಮುಂದಿಟ್ಟುಕೊAಡು ಪ್ರತಿಭಟನೆ ಮಾಡಬಹುದಿತ್ತು ಎಂದು ಕಿಡಿ ಕಾರಿದ್ದಾರೆ.
ಮೈಸೂರಿನಲ್ಲೇ ಪೋಸ್ಟಿಂಗ್ ಬೇಕು ಅಂತ ಬಂದ್ರಲ್ಲ, ಇಲ್ಲಿ ಏನ್ ಮಾಡ್ತಿದ್ದೀರ.. ಕಾರಿನ ಟೈರ್ ಪಂಕ್ಚರ್ ಹಾಕುವ ವಿಡಿಯೋ ಮಾಡಿಸಿ ಪಬ್ಲಿಸಿಟಿ ಪಡೆಯೋದಲ್ಲ. ಬೆಂಗಳೂರು ಸ್ಥಿತಿಯನ್ನ ಮೈಸೂರಿಗೆ ತಂದೊಡ್ಡಬೇಡಿ. ಮೃತ ಕುಟುಂಬಗಳ ಶಾಪ ನಿಮಗೆ ತಟ್ಟದೆ ಇರದು ಎಂದು ಡಿಸಿ ಸಿಂಧೂರಿ ಮೇಲೂ ಮಹೇಶ್ ಕಿಡಿ ಕಾರಿದ್ದಾರೆ.

Latest Indian news

Popular Stories