ಇಂದಿನಿAದ ಹೊಸ ಲಾಕ್‌ಡೌನ್ ಜಾರಿ: ಅನಗತ್ಯ ಮನೆಯಿಂದ ಹೊರಗಡೆ ಬಂದರೆ ಕಾನೂನು ಕ್ರಮ

ಬೀದರ ಮೇ 09 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಮೇ 10ರಿಂದ ಆರಂಭಗೊAಡು ಮೇ 24ರವರೆಗೆ ಜಾರಿಯಾಗಲಿರುವ ಹೊಸ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಜಿಲ್ಲೆಯಾದ್ಯಂತ ವಿಶೇಷ ರಿಯಾಯತಿ ನೀಡಲಾದ ಕರ್ತವ್ಯಗಳಿಗೆ ಹೊರತುಪಡಿಸಿ ಮತ್ಯಾವುದೇ ಕಾರಣಕ್ಕೂ ಸಾರ್ವಜನಿಕರು ಅನಗತ್ಯ ಸಂಚಾರ ಮಾಡುವುದು, ಮನೆಯಿಂದ ಹೊರಗಡೆ ಬರುವುದು ಮಾಡತಕ್ಕದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್. ಅವರು ಎಚ್ಚರಿಕೆ ನೀಡಿದ್ದಾರೆ
ಕರ್ನಾಟಕ ರಾಜ್ಯ ಸರ್ಕಾರದ ಆದೇಶದಂತೆ ಮೇ 10ರ ಬೆಳಿಗ್ಗೆ 06 ಗಂಟೆಯಿAದ ಮೇ 24ರ ಬೆಳಿಗ್ಗೆ 06 ಗಂಟೆಯವರೆಗೆ ಹೊಸ ಲಾಕ್‌ಡೌನ್ ನಿಯಮಜಾರಿಗೆ ಬರಲಿದೆ. ಆದ್ದರಿಂದ ದಿನಾಲೂ ಬೆಳಿಗ್ಗೆ 6 ಗಂಟೆಯಿAದ ಬೆಳಿಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಸಂಬAಧಿಸಿದ ಅಂಗಡಿಗಳು ಮಾತ್ರ ತೆರೆಯಲಿದ್ದು, ಅಗತ್ಯ ವಸ್ತುಗಳ ಖರಿದಿಗೆ ಹೋಗುವವರು ತಮ್ಮ ಮನೆಯ ಸಮೀಪದ ಅಂಗಡಿಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗತಕ್ಕದ್ದು, ಯಾವುದೇ ವಾಹನಗಳನ್ನು ಉಪಯೋಗಿಸತಕ್ಕದಲ್ಲ. ಒಂದು ವೇಳೆ ವಾಹನದಲ್ಲಿ ತೆರಳಿದರೆ ಅಂತಹವರ ವಾಹನಗಳನ್ನು ಜಪ್ತ ಮಾಡಲಾಗುವುದು.
ರಸ್ತೆಗಳು ಬಂದ್: ಅಂತಾರಾಜ್ಯ, ಅಂತರ ಜಿಲ್ಲಾಗಡಿ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಅಂತರರಾಜ್ಯ, ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಕೇವಲ ಸರಕುಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಇರುತ್ತದೆ.
ಗುರುತಿನ ಚೀಟಿಯನ್ನು ಬಳಸತಕ್ಕದ್ದು: ಅಗತ್ಯ ಸೇವೆ ನೀಡುವ ಅಧಿಕಾರಿ ಸಿಬ್ಬಂದಿಯವರಿಗೆ (ಕೇಬಲ ಆಪರೇಟರ್, ಮೇಡಿಕಲ್ ಅಂಗಡಿ ಸಿಬ್ಬಂದಿ, ದೂರ ಸಂಪರ್ಕ ನೌಕರರು, ಕಂದಾಯ ಇಲಾಖೆ, ಕೋರಿಯರ ಬಾಯ್ಸ್, ಕಿರಾಣಿ ಅಂಗಡಿ, ಹೋಟೆಲ್ ಮಾಲೀಕರು, ಸಿಬ್ಬಂದಿ) ಇವರಿಗೆ ಯಾವುದೇ ವಿಶೇಷ ಗುರುತಿನ ಚೀಟಿ ನೀಡಲಾಗುವುದಿಲ್ಲ. ಅವರ ಅಧಿಕಾರಿಗಳು, ಮಾಲೀಕರು ನೀಡುವಂತಹ ಗುರುತಿನ ಚೀಟಿಯನ್ನು ಬಳಸತಕ್ಕದ್ದು ಎಂದು ತಿಳಿಸಲಾಗಿದೆ.
ಕಾರ್ಖಾನೆಗಳನ್ನು ನಡೆಸಲು ಅನುಮತಿ: ಖಾಸಗಿ ಔಷಧಿ ಕಾರ್ಖಾನೆಗಳನ್ನು ನಡೆಸಲು ಅನುಮತಿವಿದ್ದು, ಕಾರ್ಖಾನೆಯವರು ತಮ್ಮ ಕಾರ್ಮಿಕರನ್ನು ವಿಶೇಷ ಬಸ್, ವಾಹನಗಳ ವ್ಯವಸ್ಥೆ ಮಾಡಿ ಅದರಲ್ಲಿ ಅವರಿಗೆ ಸಂಚಾರ, ಸಾಗಾಟ ಮಾಡತಕ್ಕದು.
ರೋಗಿಗಳಿಗೆ ಒಯ್ಯಲು ಅನುಮತಿ: ಆಟೋ ಮತ್ತು ಟ್ಯಾಕ್ಸಿಗಳು ಆಸ್ಪತ್ರೆಗಳಿಗೆ ರೋಗಿಗಳಿಗೆ, ಜನರಿಗೆ ಒಯ್ಯಲು ಮಾತ್ರ ಸಂಚರಿಸಲು ಅನುಮತಿಸಲಾಗುವುದು.
ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ: ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸರ್ಕಾರ ಜಾರಿ ತಂದಿರುವ ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories