ಮರಣ ಪ್ರಮಾಣ ತಗ್ಗಿಸಲು ಲಸಿಕೆ ಸಹಕಾರಿ

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದ ಪ್ರಕಾರ ಫ್ರಂಟ್‌ಲೈನ್‌ನಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರಲ್ಲಿ ಮರಣ ಪ್ರಮಾಣ ತಪ್ಪಿಸಲು ಕೋವಿಡ್ ವ್ಯಾಕ್ಸಿನೇಷನ್ ಪ್ರಯೋಜನಕಾರಿಯಾಗಿದೆ. ಕೋವಿಡ್ ಲಸಿಕೆ ಪಡೆದ 1 ಲಕ್ಷಕ್ಕೂ ಹೆಚ್ಚು ತಮಿಳುನಾಡು ಪೊಲೀಸ್ ಅಧಿಕಾರಿಗಳ ನಡುವೆ ನಡೆಸಿದ ಅಧ್ಯಯನದ ಫಲಿತಾಂಶಗಳು ಗಮನಾರ್ಹವಾಗಿವೆ. ಸಾವಿನ ಪ್ರಮಾಣವನ್ನು ನಿಯಂತ್ರಿಸಲು ಕೋವಿಡ್ ಲಸಿಕೆ ನೆರವಾಗಿದೆ ಎಂದು ಐಸಿಎಂಆರ್ ಮಂಗಳವಾರ ಟ್ವೀಟ್ ನಲ್ಲಿ ತಿಳಿಸಿದೆ.
ಅಧ್ಯಯನದ ಪ್ರಕಾರ, ಒಂದೇ ಡೋಸ್ ಲಸಿಕೆ ಪಡೆದ ರಾಜ್ಯ ಪೊಲೀಸ್ ಅಧಿಕಾರಿಗಳಲ್ಲಿ 82 ಪ್ರತಿಶತ ಪರಿಣಾಮವನ್ನು ತೋರಿದೆ. ಅಲ್ಲದೇ ಎರಡೂ ಡೋಸೇಜ್ ಪಡೆದವರಲ್ಲಿ 95 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಪರಿಣಾಮಕಾರಿಯಾಗಿದೆ. ರಾಜ್ಯ ಪೊಲೀಸ್ ಇಲಾಖೆ, ಐಸಿಎಂಆರ್- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ನಡೆಸಿದ ಈ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ನಲ್ಲಿ ಪ್ರಕಟಿಸಲಾಗಿದೆ.

Latest Indian news

Popular Stories