ಆನ್ ಲೈನ್ ವಂಚನೆ ಪ್ರಕರಣ ಭೇದಿಸಿದ ಪೊಲೀಸರು

ವಿಜಯಪುರ; ಆನ್ಲೈನ್‌ನಲ್ಲಿ ಮೂಲಕ ವಂಚನೆಗೊಳಗಾದ ಪ್ರಕರಣದಲ್ಲಿ ಲಕ್ಷಾಂತರ ನಗದನ್ನು ದೂರುದಾರರಿಗೆ ಮರಳಿ ನೀಡಲಾಗಿದೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು.


ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸನ್ 2022ರಲ್ಲಿ 31 ಆನ್ಲೈನ್ ವಂಚನೆ ಪ್ರಕರಣಗಳು ನಡೆದಿದ್ದು, 31 ಪ್ರಕರಣದಲ್ಲಿ 39,99,854 ಹಣ ವಂಚನೆ ಮಾಡಲಾಗಿತ್ತು. ಇದರಲ್ಲಿ 31 ದೂರುದಾರರಿಗೆ 24,45,729 ನಗದು ಮರಳಿ ನೀಡಲಾಗಿದೆ.


ಅಲ್ಲದೇ, ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ ಅಧಿಕಾರಿಗಳಾದ ರಮೇಶ ಅವಜಿ, ಪಿವೈ ಅಂಬಿಗೇರ, ಎಂಎಂ ಕುರವಿನಶೆಟ್ಟಿ ಸೇರಿದಂತೆ ಸಿಬ್ಬಂದಿಗಳಿಗೆ ಬಹುಮಾನ ಘೋಷಣೆಯನ್ನು ಎಸ್ಪಿ ಮಾಡಿದರು.

Latest Indian news

Popular Stories