ಮತಗಟ್ಟೆಗಳನ್ನು ತಲುಪಿದ ಮತಯಂತ್ರಗಳು ಹಾಗೂ ಸಿಬ್ಬಂದಿ : ಸುಗಮವಾಗಿ ನಡೆದ ಮಸ್ಟರಿಂಗ್ ಕಾರ್ಯ

ಕಾರವಾರ: ಮಂಗಳವಾರ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಸೋಮವಾರ ಮತಯಂತ್ರ ಮತ್ತು ಸಿಬ್ಬಂದಿಗಳ ನಿಯೋಜನೆ ಕಾರ್ಯ ಕಾರವಾರ ಸೇರಿದಂತೆ ಕುಮಟಾ,ಭಟ್ಕಳ, ಹಳಿಯಾಳ, ಶಿರಸಿ,‌ಯಲ್ಲಾಪುರ ,ಖಾನಾಪುರ, ‌ಕಿತ್ತೂರುಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು‌ . ಜಿಲ್ಲಾ ಚುನಾವಣಾಧಿಕಾರಿ ಗಂಗೂಬಾಯಿ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ,‌ಸಿಬ್ಬಂದಿಗಳಿಗೆ ಆತ್ಮ ಸ್ಥೈರ್ಯದಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು‌.ಜಿಲ್ಲೆಯಲ್ಲಿ 1977 ಮತಗಟ್ಟೆಗಳಿದ್ದು, 68 ವಿಶೇಷ ಮತಗಟ್ಟೆಗಳಿವೆ. ಮತದಾನ‌ ಪ್ರಕ್ರಿಯೆಗೆ 6939 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

1015 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.‌ ವೆಬ್ ಕಾಸ್ಟಿಂಗ್ ಸಿಸ್ಟೆಮ್ ನಿಂದ ಜಿಲ್ಲಾ ಕೇಂದ್ರ ದಲ್ಲಿ ಕುಳಿತು ಎಲ್ಲಾ 1015 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನೋಡಬಹುದು.
ಮತದಾನ ಕ್ರಿಯೆ ವೀಕ್ಷಿಸಲು 303 ಮೈಕ್ರೋ ಅಬ್ಜರ್ವರ್ಸ,
21 ವಿಡಿಯೋಗ್ರಾಫರ್ಸ,
200 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ‌ .
25 ಮಹಿಳಾ ಮತಗಟ್ಟೆ ನಿಯೋಜಿಸಲಾಗಿದೆ.‌ಇಲ್ಲಿ ಮಹಿಳಾ‌ ಮತದಾರರ ಸಂಖ್ಯೆ ಹೆಚ್ಚಿದೆ.‌
17 ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದೆ.
10 ಅಂಗವಿಕಲ ಸ್ನೇಹಿ ಮತಗಟ್ಟೆಗಳು, 16 ಸಂಪ್ರದಾಯಿಕ ಮತಗಟ್ಟೆಗಳನ್ನು ರೂಪಿಸಲಾಗಿದೆ.‌

164 ಬಸ್ ಬಳಕೆ :
ಚುನಾವಣಾ ಯಂತ್ರ ,ಸಿಬ್ಬಂದಿ ಸಾಗಟ ಮತ್ತು ಸಂಚಾರಕ್ಕೆ 164 ಬಸ್ ,169 ಟೆಂಪೋ ನಿಯೋಜಿಸಲಾಗಿದೆ. 215 ಕಡೆ ಮರಗಳೇ ಇಲ್ಲದ ಮತದಾನ ಕೇಂದ್ರಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. 215 ಮತಗಟ್ಟೆಗಳಲ್ಲಿ ಶಾಮೀಯಾನ ಅಳವಡಿಸಲಾಗಿದೆ.

ಕ್ಷೇತ್ರದಲ್ಲಿ 16,41,156 ಮತದಾರರು :ಕ್ಷೇತ್ರದಲ್ಲಿ 16,41,156 ಮತದಾರರಿದ್ದು, ಇವರಲ್ಲಿ 8,23,604 ಪುರುಷ ಮತದಾರರು, 8, 17, 536 ಮಹಿಳಾ ಮತದಾರರು, 16 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ‌.

ಚುನಾವಣಾ ಕಣದಲ್ಲಿ ಕಾಂಗ್ರೆಸ್, ಬಿಜೆಪಿ, ‌ಎಸ್ ಯು ಸಿಐ ಕಮ್ಯುನಿಸ್ಟ್, ಕರ್ನಾಟಕ ರಾಷ್ಟ್ರ ನಿರ್ಮಾಣ ಸಮಿತಿ ಅಭ್ಯರ್ಥಿ ಸೇರಿದಂತೆ ,ಪಕ್ಷೇತರರು ಸಹ ಕಣದಲ್ಲಿದ್ದಾರೆ. ಒಟ್ಟು 13 ಜನ ಚುನಾವಣಾ ಕಣದಲ್ಲಿದ್ದು , ಇವರ ರಾಜಕೀಯ ಭವಿಷ್ಯವನ್ನು ಮತದಾರರು ಮತ‌ ಚಲಾಯಿಸುವ ಮೂಲಕ ಬರೆಯಲಿದ್ದಾರೆ‌.

Latest Indian news

Popular Stories