
3 ತಿಂಗಳ ಕಾಲ ಕೆ.ಎ.ಎಸ್. ಮತ್ತು ಪಿ.ಎಸ್.ಐ. ಉಚಿತ ತರಬೇತಿ
ಬೀದರ್, ಜ. 01:- ಧಾರವಾಡದ ಪೇಸ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಸಂಸ್ಥೆ ಮತ್ತು ಬೀದರದ ಸ್ಪರ್ಧಾಸಂಕಲ್ಪ ಕರಿಯರ್ ಅಕಾಡಮಿಯ ಸಹಭಾಗಿತ್ವದಲ್ಲಿ ದಿ: 05/01/2021 ರಂದು ಬೆಳಗ್ಗೆ 10:00 ಗಂಟೆಗೆ 100 ಅಂಕಗಳ ಒಂದು ಮಾದರಿ ಪರೀಕ್ಷೆಯನ್ನು ಪರೀಕ್ಷೆ ಬೀದರ್ ನಗರದ ಕನ್ನಡಾಂಬೆ ಸರ್ಕಲ್ ಬಳಿಯಿರುವ ನೆಹೆರು ಸ್ಟೇಡಿಯಂ ಹತ್ತಿರದಲ್ಲಿರುವ ಶ್ರೀ ಸಾಯಿ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಸಾಯಿ ಶಾಲಾ ಕಟ್ಟಡದಲ್ಲಿ ನಡೆಸಲಾಗುವುದು. ವಿಧ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಉಚಿತ ಮತ್ತು ರಿಯಾಯತಿಯನ್ನು ನೀಡಿ 3 ತಿಂಗಳಕಾಲ ಕೆ.ಎ.ಎಸ್.ಮತ್ತು ಪಿ.ಎಸ್.ಐ. ಪರೀಕ್ಷೆಗಳ ತರಬೇತಿಯನ್ನು ಧಾರವಾಡದಲಿ ನೀಡಲಾಗುವದು. ಎಂದು ಪಾಶ್ರ್ವನಾಥ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ಇದರ ಲಾಭ ಪಡೆದುಕೊಳ್ಳಬೇಕೆಂದು ಬೀದರ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದಾರೆ ಈ ಅರ್ಹತಾ ಪರೀಕ್ಷೆಯಲ್ಲಿ ಪಾಸಾದವರಿಗೆ ಉಚಿತ ತರಬೇತಿ ಸಿಗಲಿದೆ ಎಂದವರು ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಹಾಗಿ ಮೋ:9448298559 ಗೆ ಸಂಪರ್ಕಿಸ ಬಹುದು ಎಂದು ಅವರು ವಿವರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸರಕಾರವು ಕೆ.ಎ.ಎಸ್. 395. ಹುದ್ದೆಗಳಿಗೆ. ಹಾಗೂ ಪಿ.ಎಸ್.ಐ 446. ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಹಾಗಾಗಿ ಕಲ್ಯಾಣ ಕರ್ನಾಟಕದ ಬೀದರ ಕಲಬುರ್ಗಿ.ಯಾದಗಿರ.ಕೊಪ್ಪಳ.ರಾಯಚೂರ ಮತ್ತು ಬಳ್ಳಾರಿ ಜಿಲ್ಲೆಗಳ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ. ಈ ತರಬೇತಿಯನ್ನು ನೀಡಲಾಗುವದು ಹಾಗೂ ತರಬೇತಿಯನ್ನು ಬೆಂಗಳೂರು ಮತ್ತು ಧಾರವಾಡದ ನುರಿತ ತಜ್ಞರಿಂದ ಭೊದನೆ ಮಾಡಿಸಲಾಗುವುದು ಹಾಗಾಗಿ ಸ್ಪರ್ಧಾರ್ಥಿಗಳೂ ಇದರ ಲಾಭವನ್ನು ಪಡೆಯಬೆಕೆಂದು. ಪೇಸ ಸಂಸ್ಥೆಯ ನಿರ್ದೆಶಕರಾದ ಪಾಶ್ರ್ವನಾಥ ಧ. ಪಾಲಭಾವಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದಾರೆ.




