
ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರರ ನೇಮಕಕ್ಕೆ ಅರ್ಜಿ ಆಹ್ವಾನ
ಬೀದರ ಜೂನ್ 8 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 20 ಸಾವಿರ ಮಾನವದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಜೂನ.23 ಸಂಜೆ 5.30 ಗಂಟೆಯವರೆಗೆ ಮಾತ್ರ ಅವಕಾಶ ಇರುತ್ತದೆ. ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಹತೆಗಳು: ಈ ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು, ಆಭ್ಯರ್ಥಿಯು ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್ ಕಾರ್ಡ ಹೊಂದಿರಬೇಕು, ಆಭ್ಯರ್ಥಿಯು ಕಳೆದ 3 ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು. ವಯೋಮಿತಿ 45 ವರ್ಷ ಮೀರಬಾರದು. ಆಭ್ಯರ್ಥಿಗೆ ಓದು, ಬರಹ ಚೆನ್ನಾಗಿ ತಿಳಿದಿರಬೇಕು. ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಹಾಗೂ ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಆಯ್ಕೆ ವಿಧಾನ: ಆಭ್ಯರ್ಥಿಗಳು ಅರ್ಜಿಯನ್ನು ತಮ್ಮ ಗ್ರಾಮ ಪಂಚಾಯತಿಗೆ ಸಲ್ಲಿಸುವುದು, 10ನೇ ತರಗತಿಯಲ್ಲಿ ಗಳಿಸಿದ ಶೇಕಡವಾರು ಅಂಕಗಳಲ್ಲಿ ಶೇ. 50 ರಷ್ಟನ್ನು ಪರಿಗಣಿಸುವುದು. ಆಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ ಅಕುಶಲ ಕೂಲಿ ನಿರ್ವಹಿಸಿದ ಸರಾಸರಿ ಮಾನವದಿನಗಳಿಗೆ 20 ಅಂಕಗಳನ್ನು ನೀಡಲಾಗುವುದು, ಆಭ್ಯರ್ಥಿಯು ಯೋಜನೆಯಡಿ ಕಾಯಕ ಬಂಧುವಾಗಿ ಕಾರ್ಯನಿರ್ವಹಿಸಿದಲ್ಲಿ ಪ್ರತಿ ವರ್ಷ ಅನುಭವಕ್ಕೆ ತಲಾ 05 ಅಂಕಗಳAತೆ ಗರಿಷ್ಠ 20 ಅಂಕಗಳು, ಆಭ್ಯರ್ಥಿಯು ಕಾಯಕ ಬಂಧುವಾಗಿ ಕಾರ್ಯನಿರ್ವಹಿಸಿರುವ ಕುರಿತು ಪಂ.ಅ.ಅ. ಗಳಿಂದ ನಮೂನೆ 01 ರಲ್ಲಿ ದೃಢೀಕರಣ ಸಲ್ಲಿಸುವುದು, ಅಭ್ಯರ್ಥಿಯು ಪ.ಜಾ. ಅಥವಾ ಪ.ಪಂಗಡಕ್ಕೆ ಸೇರಿದ್ದಲ್ಲಿ 10 ಅಂಕಗಳು, ಅಭ್ಯರ್ಥಿಯು ವಿಧವೆ ಅಥವಾ ಸಿಂಕಲ್ ಪೇರೆಂಟ್ ಆಗಿದ್ದಲ್ಲಿ 05 ಅಂಕಗಳು ಮತ್ತು ವಿಕಲಚೇತನರಾಗಿದ್ದಲ್ಲಿ 05 ಅಂಕಗಳು, ಗೌರವಧನ ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ 6000 ರೂ. ಮಾಸಿಕ ನಿಗದಿತ ಗೌರವಧನ ನೀಡಲಾಗುವುದು, ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ 5000 ರೂ. ವರೆಗೆ ಪ್ರೋತ್ಸಾಹಧನ ಪಡೆಯಬಹುದಾಗಿದೆ, ಪ್ರೋತ್ಸಾಹ ಧನದ ವಿವರಣೆಯನ್ನು ನೇಮಕಾತಿ ನಂತರ ನೀಡಲಾಗುವುದು. ಹಾಗೂ ಮಾನ್ಯ ಸರ್ಕಾರದ ಪತ್ರ ಸಂಖ್ಯೆ: RDC-EGS/07/2021 E-416051 ನೀಡಲಾಗಿರುವ ಮಾರ್ಗದರ್ಶನ ಹಾಗೂ ನಿರ್ದೇಶನಗಳಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
ಹೆಚ್ಚಿನ ಮಾಹಿತಿಗಾಗಿ : ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲ್ಲೂಕ ಪಂಚಾಯತ ಔರಾದ(ಬಿ) ಮೊ.9845846445, ಕಮಲನಗರ ಮೊ.9900876414, ಬಸವಕಲ್ಯಾಣ ಮೊ.9731254117, ಹುಲಸೂರ ಮೊ.9900272780, ಭಾಲ್ಕಿ ಮೊ.9448035296, ಬೀದರ ಮೊ.9663949166, ಹುಮನಾಬಾದ ಮೊ.8105475039, ಚಿಟಗುಪ್ಪಾ ಮೊ. 9739085273 ಕ್ಕೆ ಸಂಪರ್ಕಿಸಲು ಕೋರಲಾಗಿದೆ.




