
ಬಳ್ಳಾರಿ: ನಿಯಮ ಉಲ್ಲಂಘಿಸಿದ್ರೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕ್ರಮ- ಡಿಸಿ ನಕುಲ್
ಬಳ್ಳಾರಿ,ಅ.19: ಅ.27ರವರೆಗೆ ನಡೆಯಲಿರುವ ನಾಡಹಬ್ಬ ದಸರಾ ಆಚರಣೆಯನ್ನು ಸರಕಾರವು ಹೊರಡಿಸಲಾದ ಮಾರ್ಗಸೂಚಿ ಅನುಸಾರವೇ ಆಚರಿಸಬೇಕು ಮತ್ತು ಮಾರ್ಗಸೂಚಿಯಲ್ಲಿನ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಹಾಗೂ ಮಾರ್ಗಸೂಚಿಗಳಂತೆ ಜಿಲ್ಲೆಯಲ್ಲಿ ನಾಡಹಬ್ಬ ದಸಾರಹಬ್ಬದ ಆಚರಣೆ ಸಂಬಂಧವಾಗಿ ಕೇಂದ್ರ ಸರ್ಕಾರ ಹೊರಡಿಸಿದ ತೆರವು-5 ರ ಅವಧಿಯಲ್ಲಿನ ಅನುಮತಿಸಲಾದ ಕಾರ್ಯ ಚಟುವಟಿಗಳಲ್ಲಿ ಕಾಂಟೈನ್ ಮೆಂಟ್ ವಲಯಗಳನ್ನು ಹೊರೆತುಪಡಿಸಿದ ಪ್ರದೇಶಗಳಲ್ಲಿ 15ನೇ ಅಕ್ಟೋಬರ್ 2020 ನಂತರ ಈಗಾಗಲೇ 100 ಜನರಿಗೆ ಅನುಮತಿಸಲಾದ ಪರಿಮಿತಿಯನ್ನು ಮೀರಿ ಸೇರುವಂತಹ ಸಾಮಾಜಿಕ/ಶೈಕ್ಷಣಿಕ/ಕ್ರಿಡೆ/ಮನೋರಂಜನೆ/ಸಾಂಸ್ಕತಿಕ/ಧಾರ್ಮಿಕ/ರಾಜಕೀಯ ಕಾರ್ಯಕ್ರಮಗಳು ಮತ್ತು ಇತರೆ ಸಮಾರಂಭಗಳಿಗೆ ಮುಳಗವಸು ಕೈತೊಳಯುವಿಕೆ ಅಥವಾ ಸ್ಯಾನಿಟೈಸರ್,ಥರ್ಮಲ್ ಸ್ಕಾನಿಂಗ್ ಮತ್ತು ಕೈತೊಳೆಯುವಿಕೆ ಅಥವಾ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ ಅನುಮತಿಸಲು ಅವಕಾಶ ಕಲ್ಪಿಸಿದೆ ಎಂದು ಅವರು ವಿವರಿಸಿದ್ದಾರೆ.
ನಾಡಹಬ್ಬವಾದ ದಸರವನ್ನು 9 ದಿನಗಳ ಕಾಲ ಅಂದರೇ ಅ.26ರವರೆಗೆ ಆಚರಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಮಿಕ ರೋಗವು ಹರಡುತ್ತಿರುವುದರಿಂದ ದಸರಾ ಹಬ್ಬವನ್ನು ಸರಳ ರೀತಿಯಲ್ಲಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 100 ಕ್ಕಿಂತ ಹೆಚ್ಚು ಜನರು ಒಮ್ಮಲೆ ಸೇರುವಂತಿಲ್ಲ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.ಹಂತ ಹಂತವಾಗಿ ಒಂದು ಪಲ್ಲಕ್ಕಿಗೂ ಮತ್ತೊಂದು ಪಲ್ಲಕ್ಕಿಗೆ ಉತ್ಸವಕ್ಕೆ ಕನಿಷ್ಟ ಅಂತರ ಕಾಪಾಡಿಕೊಳ್ಳತಕ್ಕದ್ದು.ನಿಯಮಿತ ಅವಧಿಯಲ್ಲಿಯೇ ಮುಕ್ತಾಯಗೊಳಿಸಲು ಕ್ರಮ ಅನುಸರಿಸುವುದು. ನಾಡಹಬ್ಬ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೇ ನಡೆಸಲಾಗುವ ಕಾರ್ಯಕ್ರಮಗಳು ನಿμÉೀಧಿಸಲಾಗಿದೆ. ದೇವಸ್ಥಾನಕ್ಕೆ ಬರುವಂತಹ ಭಕ್ತಾಧಿಗಳಿಗೆ ಕಡ್ಡಾಯ ಮುಖಗವಸು ಧರಿಸುವಿಕೆ, ಸಾಮಾಜಿಕ ಅಂತರ ಮತ್ತು ಎರಡು ಹಸ್ತಗಳಿಗೆ ಸ್ಯಾನಿಟಟೈಸೇಷನ್ ಮಾಡುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ದೇವರ ದರ್ಶನ ಮಾಡುವುದು. ಕೊರೊನಾ ಸೊಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು .ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ/ಪೆÇೀಲಿಸ್ ಇಲಾಖೆ/ಮಹಾನಗರ ಪಾಲಿಕೆ /ಮಾಲಿನ್ಯ ನಿಯಂತ್ರಣ ಮಂಡಳಿ/ಅಗ್ನಿಶಾಮಕ ಇಲಾಖೆ/ಜಿಲ್ಲಾಢಳಿತ ಹಾಗೂ ಇತರೆ ಇಲಾಖೆ/ಕಾಪೆರ್Çೀರೇಶನ್ /ಪ್ರಾಧಿಕರಗಳಿಂದ ಹೊರಿಡಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಅವರು ತಿಳಿಸಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಸಾಮಾಜಿಕ ಶಾಂತಿ ,ಸೌಹಾರ್ಧತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ದಸರಾ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಾಮಾಜದಲ್ಲಿ ಕಾನೂನು ಸುವ್ಯವಸ್ಥಗೆ ಭಂಗ ಬಾರದಂತೆ ಕಾಪಾಡುವುದು. ಈ ಮಾರ್ಗಸೂಚಿಗಳು ನವರಾತ್ರಿ ಹಾಗೂ ದುರ್ಗಾಪೂಜೆಯ ಆಚರಣೆಗೂ ಅನ್ವಯವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.,
ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವವ ವಿರುದ್ದ ವಿಪ್ಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರಡಿಯಲ್ಲಿ ಶಿಸ್ತುನ/ಕಾನೂನಿನ ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಭಂಧಗಳ ಮೇರೆಗೆ ಕ್ರಮಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.




